ಕೊರೋನಾ ವೈರಸ್: ಸರ್ಕಾರದ ಬಂದ್ ಆದೇಶದಲ್ಲಿ ಗೊಂದಲ, ನಗರದಲ್ಲಿ ಎಂದಿನಂತೆ ವಹಿವಾಟು ನಡೆಸುತ್ತಿರುವ ಪಬ್, ಬಾರ್'ಗಳು

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಬಂದ್'ಗೆ ಕರೆ ನೀಡಿದ್ದರೂ, ಆದೇಶದ ನಡುವಯೂ ಸಿಎಲ್-4 ಪರವಾನಗಿ ಹೊಂದಿರುವ ಕ್ಲಬ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಬ್ ಹಾಗೂ ಬಾರ್ ಗಳು ಎಂದಿನಂತೆ ತಮ್ಮ ವ್ಯಾಪಾರ ಹಾಗೂ ವಹಿವಾಟುಗಳನ್ನು ನಡೆಸುತ್ತಿರುವುದು ಕಂಡು ಬಂದಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಬಂದ್'ಗೆ ಕರೆ ನೀಡಿದ್ದರೂ, ಆದೇಶದ ನಡುವಯೂ ಸಿಎಲ್-4 ಪರವಾನಗಿ ಹೊಂದಿರುವ ಕ್ಲಬ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಬ್ ಹಾಗೂ ಬಾರ್ ಗಳು ಎಂದಿನಂತೆ ತಮ್ಮ ವ್ಯಾಪಾರ ಹಾಗೂ ವಹಿವಾಟುಗಳನ್ನು ನಡೆಸುತ್ತಿರುವುದು ಕಂಡು ಬಂದಿತ್ತು. 

ಸಿಎಲ್-4 ಪರವಾನಗಿ ಪಡೆದಿರುವ ನಗರ ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಬೆಂಗಳೂರು ಗಾಲ್ಫ್ ಕ್ಲಬ್, ಬೆಂಗಳೂರು ಟರ್ಫ್ ಕ್ಲಬ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಕ್ಲಬ್ ಮತ್ತು ಇತರೆ ಪಬ್ ಮತ್ತು ಬಾರ್ ಗಳು ಬಂದ್ ಆಗಿದ್ದವು. ಶನಿವಾರದವರೆಗೂ ಈ ಬಾರ್ ಮತ್ತು ರೆಸ್ಟೋರೆಂಟ್ ಗಳು ಬಂದ್ ಆಗಿರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಕ್ಲಬ್'ನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ. ಇದರಂತೆ ಎಲ್ಲಾ ಕ್ರೀಡಾ ಚಟುವಟಿಕೆಗಲು, ಕ್ಯಾಂಟೀನ್ ಹಾಗೂ ಬಾರ್'ಗಳು ಬಂದ್ ಆಗಿರಲಿವೆ ಎಂದು ಕೆಎಸ್'ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದ್ದಾರೆ. 

ಶನಿವಾರದವರೆಗೂ ಕ್ಲಬ್ ಕ್ಲೋಸ್ ಆಗಿರಲಿದೆ. ಸರ್ಕಾರ ಮತ್ತೆ ಬಂದ್ ಆದೇಶವನ್ನು ಮುಂದುವರೆಸಿದ್ದೇ ಆದರೆ, ಆದೇಶವನ್ನು ಪಾಲನೆ ಮಾಡಲಾಗುತ್ತದೆ ಎಂದು ಸೆಂಚೂರಿ ಕ್ಲಬ್ ಅಧ್ಯಕ್ಷ ಸುರೇಶ್ ನಾಯ್ಡು ಹೇಳಿದ್ದಾರೆ. 

ಕೇವಲಬ ಬಾರ್ ರೆಸ್ಟೋರೆಂಟ್ ಅಷ್ಟೇ ಅಲ್ಲದೆ, ಈಜುಕೊಳ, ಜಿಮ್ ಹಾಗೂ ಯಾವುದೇ ಕಾರ್ಯಗಳನ್ನೂ ಮಾರ್ಚ್ 31ರವರೆಗೂ ನಡೆಸಲಾಗುವುದಿಲ್ಲ ಎಂದು ಬೆಂಗಳೂರು ಗಾಲ್ಫ್ ಕ್ಲಂಬ್ ಕಾರ್ಯದರ್ಶಿ ಸುನಿಲ್ ವಸಂತ್ ಹೇಳಿದ್ದಾರೆ. 

ಸರ್ಕಾರ ಆದೇಶ ನೀಡಿದ ಕೂಡಲೇ ಮಾಲ್ ಗಳು, ಥಿಯೇಟರ್ ಗಳು, ಪಬ್ ಹಾಗೂ ನೈಟ್ ಬಾರ್ ಗಳನ್ನು ಬಂದ್ ಮಾಡಿಸಲಾಗಿತ್ತು. ಆದರೆ, ಪಬ್ ಹಾಗೂ ರೆಸ್ಟೋರೆಂಟ್ ಬಂದ್ ಕುರಿತು ಕೆಲ ಗೊಂದಲಗಳು ಸೃಷ್ಟಿಯಾಗಿವೆ. ಸಿಎಲ್-9 ಪರವಾಗಿ ಹೊಂದಿರುವ ಪಬ್, ಬಾರ್ ಗಳು ತೆರೆಯಬಹುದು ಎಂದು ಅಬಕಾರಿ ಇಲಾಖೆ ಹೇಳಿದ್ದು, ಪೊಲೀಸ್ ಇಲಾಖೆ ಮಾತ್ರ ಬಂದ್ ಮಾಡುವಂತೆ ಆದೇಶ ನೀಡಿತ್ತು. 

ಇನ್ನು ಬಿಬಿಎಂಪಿ ಕೂಡ 30-40 ಜನರನ್ನು ಕೂರಿಸುವ ಸಾಮರ್ಥ್ಯವುಳ್ಳ ಪಬ್ ಹಾಗೂ ಬಾರ್ ಗಳು ಬಂದ್ ಮಾಡಬೇಕೆಂದೂ ಆದೇಶಿಸಿತ್ತು. ಇನ್ನು ಈ ಗೊಂದಲವನ್ನು ಅಧಿಕಾರಿಗಳೇ ಒಪ್ಪಿಕೊಕಂಡಿದ್ದಾರೆ. 

ಹೌದು, ಕೆಲ ತಾಂತ್ರಿಕ ದೋಷಗಳು ಕಂಡು ಬಂದಿರುವುದು ನಿಜ, ಇಂತಹ ಪರಿಸ್ಥಿತಿಯನ್ನು ರಾಜ್ಯ ಮೊದಲನೇ ಬಾರಿಗೆ ನಿಭಾಯಿಸುತ್ತಿದ್ದು, ಸೋಮವಾರ ಈ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ. ಈಗಾಗಲೇ ರಾಜ್ಯ ಪೊಲೀಸರು ಸೆಕ್ಷನ್ 31(1) ಜಾರಿ ಮಾಡಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವಹು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com