ಕೊರೋನಾ ವೈರಸ್: ರಾಜ್ಯದ 6 ಸರ್ಕಾರಿ ಕಟ್ಟಡಗಳಲ್ಲಿ ಥರ್ಮಲ್ ತಪಾಸಣಾ ಕೇಂದ್ರಗಳ ಸ್ಥಾಪನೆ 

ಕೊರೋನಾ ವೈರಸ್ ಸೋಂಕು ತಡೆಗೆ ರಾಜ್ಯದ 6 ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ನಾಳೆಯಿಂದ ಥರ್ಮಲ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. 
ಕೊರೋನಾ ವೈರಸ್: ರಾಜ್ಯದ 6 ಸರ್ಕಾರಿ ಕಟ್ಟಡಗಳಲ್ಲಿ ಥರ್ಮಲ್ ತಪಾಸಣಾ ಕೇಂದ್ರಗಳ ಸ್ಥಾಪನೆ 

ಬೆಂಗಳೂರು: ಕೊರೋನಾ ವೈರಸ್ ಸೋಂಕು ತಡೆಗೆ ರಾಜ್ಯದ 6 ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ನಾಳೆಯಿಂದ ಥರ್ಮಲ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. 


ವಿಧಾನಸೌಧ, ವಿಕಾಸಸೌಧ, ಎಂ ಎಸ್ ಬಿಲ್ಡಿಂಗ್, ಶಾಸಕರ ಭವನ, ಕರ್ನಾಟಕ ಹೈಕೋರ್ಟ್ ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಮತ್ತು ಸಿಟಿ ಸಿವಿಲ್ ಕೋರ್ಟ್ ಗಳಲ್ಲಿ ಈ ಥರ್ಮಲ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.


ತಪಾಸಣೆಯನ್ನು ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯೊಳಗೆ ನಡೆಸಲಾಗುತ್ತದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೈಗವಸುಗಳು, ಸ್ಯಾನಿಟೈಸರ್ಗಳು, ಎನ್ 95 ಮಾಸ್ಕ್ ಗಳು ಮತ್ತು ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಪ್ರತಿ ತಪಾಸಣಾ ಕೇಂದ್ರದಲ್ಲಿ ಇಬ್ಬರು ದಾದಿಯರು ಮತ್ತು ಹೆಚ್ಚುವರಿ ಸಿಬ್ಬಂದಿ ರೊಟೇಶನ್ ನಲ್ಲಿ ನಿರಂತರವಾಗಿ ತಪಾಸಣೆ ಮಾಡುತ್ತಿರುತ್ತಾರೆ.


ಬೆಂಗಳೂರು ನಗರ, ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳಿಂದ ಮೂರು ಜಿಲ್ಲಾ ಆರೋಗ್ಯಾಧಿಕಾರಿಗಳು ಕಾರ್ಯಯೋಜನೆ ರೂಪಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಭಿವೃದ್ಧಿ ಅಧಿಕಾರಿಗಳು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿಗಳ ಸಹಾಯದಿಂದ 6 ಕಡೆಗಳಲ್ಲಿ ತಪಾಸಣೆಗೆ ಸಕಲ ವ್ಯವಸ್ಥೆಗಳನ್ನು ಮಾಡಲಿದ್ದಾರೆ.


ಇದಕ್ಕಾಗಿ ಉಪಕರಣಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಸೊಸೈಟಿ(ಕೆಡಿಎಲ್ ಡಬ್ಲ್ಯುಎಸ್) ಸಂಗ್ರಹಿಸಿ ಪೂರೈಸಲಾಗುತ್ತದೆ. ಪೂರೈಕೆಯಲ್ಲಿ ಕೊರತೆ ಮತ್ತು ವ್ಯತ್ಯಯ ಕಂಡುಬಂದರೆ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಬಳಸಲಾಗುತ್ತದೆ.


ಈ ತಪಾಸಣೆ ನಾಳೆಯಿಂದ ಆರಂಭವಾಗಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ಮುಂದುವರಿಯಲಿದೆ.ಕೊರೋನಾ ಶಂಕೆ ಕಂಡುಬಂದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾವಾಗಲೂ 108 ಸಂಖ್ಯೆಯ ಆಂಬ್ಯುಲೆನ್ಸ್ ಸಿದ್ದವಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com