ಕಿಲ್ಲರ್ ಕೊರೊನಾಗೆ ಲಸಿಕೆ ಪತ್ತೆ ತಂಡದಲ್ಲಿ ಕನ್ನಡಿಗ: ಹಾಸನದ ವಿಜ್ಞಾನಿಗೆ  ಸ್ಥಾನ

ವಿಶ್ವ ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್ ಯುರೋಪಿನಲ್ಲಿ ಹಲವರ ನಿದ್ದೆಗೆಡೆಸಿದೆ. ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹಲವು ದೇಶಗಳು ಕೈಜೋಡಿಸಿವೆ. ವಿಜ್ಞಾನಿಗಳು ಚುಚ್ಚುಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ವಿಶ್ವ ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್ ಯುರೋಪಿನಲ್ಲಿ ಹಲವರ ನಿದ್ದೆಗೆಡೆಸಿದೆ. ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹಲವು ದೇಶಗಳು ಕೈಜೋಡಿಸಿವೆ. ವಿಜ್ಞಾನಿಗಳು ಚುಚ್ಚುಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

ಕೊರೊನಾ ವೈರಸ್‍ಗೆ ವ್ಯಾಕ್ಸಿನ್ ಕಂಡುಹಿಡಿಯುವ ತಂಡದಲ್ಲಿ ಹಾಸನ ಮೂಲದ ವ್ಯಕ್ತಿ ಸ್ಥಾನ ಪಡೆದಿದ್ದಾರೆ.

ಜಿಲ್ಲೆಯ ಅರಕಲಗೂಡು ತಾಲೂಕಿನ ಮಹದೇಶ ಪ್ರಸಾದ್ ಎಂಬವರು ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಮಹದೇಶ್ ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದರು. ವಿದೇಶದಲ್ಲಿರುವ ವಿಜ್ಞಾನಿಗಳು ಹಿಂದಿರುಗಿ ಎಂಬ ಪ್ರಧಾನಿ ಮೋದಿ ಕರೆ ಮೆರೆಗೆ ಮಹದೇಶ್ ಭಾರತಕ್ಕೆ ಮರಳಿದ್ದರು. ಆದರೆ ಇದೀಗ ಮತ್ತೆ ಅವರು ಬೆಲ್ಜಿಯಂಗೆ ತೆರಳಿದ್ದಾರೆ.

ಮಹದೇಶ್ ಸಂಶೋಧನೆಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೊನಾ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು, ವಿಶ್ವ ಸಂಸ್ಥೆ ಕೊರೊನಾ ಔಷಧಿ ಹತ್ತು ತಂಡ ರಚಿಸಿತ್ತು. ಈ ತಂಡದಲ್ಲಿ ಹೆಮ್ಮೆಯ ಕನ್ನಡಿಗ ಮಹದೇಶ ಪ್ರಸಾದ್ ಸ್ಥಾನ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com