ಕೊರೊನಾ ವಿರುದ್ಧ ರಾಜ್ಯದ ಸಮರ, ವೈದ್ಯಕೀಯ ಕಾಲೇಜುಗಳೇ ಈಗ ವಾರ್ ರೂಂ..!!

ಕರೋನ ಜಗತ್ತಿನ ವಿರುದ್ದ ಸಮರ ಸಾರಿ, ಸವಾಲಾಗಿದ್ದರೆ ಹೇಗಾದರೂ ಮಾಡಿ ರಾಜ್ಯದಿಂದ ಕರೋನ ಒಡಿಸಲು ರಾಜ್ಯ ಸರ್ಕಾರ ಕರೋನ ವಿರುದ್ಧ ಸಮರ ಸಾರಿದ್ದು, ಇದಕ್ಕಾಗಿ ವಾರ್ ರೂಂ ಸಜ್ಜಾಗಿದೆ. 
ಕೊರೊನಾ ವಿರುದ್ಧ ರಾಜ್ಯದ ಸಮರ, ವೈದ್ಯಕೀಯ ಕಾಲೇಜುಗಳೇ ಈಗ ವಾರ್ ರೂಂ..!!
ಕೊರೊನಾ ವಿರುದ್ಧ ರಾಜ್ಯದ ಸಮರ, ವೈದ್ಯಕೀಯ ಕಾಲೇಜುಗಳೇ ಈಗ ವಾರ್ ರೂಂ..!!

ಬೆಂಗಳೂರು: ಕೊರೋನ ಜಗತ್ತಿನ ವಿರುದ್ದ ಸಮರ ಸಾರಿ, ಸವಾಲಾಗಿದ್ದರೆ ಹೇಗಾದರೂ ಮಾಡಿ ರಾಜ್ಯದಿಂದ ಕರೋನ ಒಡಿಸಲು ರಾಜ್ಯ ಸರ್ಕಾರ ಕರೋನ ವಿರುದ್ಧ ಸಮರ ಸಾರಿದ್ದು, ಇದಕ್ಕಾಗಿ ವಾರ್ ರೂಂ ಸಜ್ಜಾಗಿದೆ. 

ಕೊರೋನ  ವಿರುದ್ದ ಯುದ್ದ ಸಾರಿ ಅದನ್ನು ರಾಜ್ಯದಿಂದ ಒಡಿಸಲು ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ವಾರ್ ರೂಂ ರೀತಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲ್ಯಾಬ್, ಹೆಲ್ಪ್ ಡೆಸ್ಕ್ ಪ್ರಾರಂಭಿಸಲಾಗುತ್ತದೆ. ಎರಡು, ಮೂರು ತಿಂಗಳ ಮಟ್ಟಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಮಾಹಿತಿ ಪಡೆದುಕೊಳ್ಲಲಾಗುತ್ತಿದೆ ಎಂದು ಅವರು ವಿವರಿಸಿದರು.

ಬೆಳಗಾವಿ, ಹುಬ್ಬಳ್ಳಿ, ಹಾಸನ, ಶಿವಮೊಗ್ಗ ಅನೇಕ ಕಡೆಗಳಲ್ಲಿ ಎಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಲ್ಯಾಬ್ ಮಾಡಲು ನಿರ್ಧರಿಸಲಾಗಿದೆ. ಮುಂದುವರೆದ ದೇಶಗಳ ರೀತಿ ಕೊರೊನಾ ಸ್ಟೇಜ್ ದಾಟಿದರೆ ಕಷ್ಟವಾಗುತ್ತದೆ. ಆ ನಿಟ್ಟಿನಲ್ಲೂ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಸರ್ಕಾರಿ ಕಟ್ಟಡಗಳನ್ನು ಕೊರೊನಾ ತಡೆಗಟ್ಟಲು ಬಳಸಿಕೊಂಡು ಕರೋನ ಓಡಿಸಲು ಹೋರಾಟ ಮಾಡುದಾಗಿ ಹೇಳಿದರು. 

ಇಂದು ತುರ್ತಾಗಿ ಎಲ್ಲಾ ವೈದ್ಯಕೀಯ ಕಾಲೇಜು ವೈದ್ಯರ ಸಭೆ ಮಾಡಿದ್ದೇನೆ. ಎಲ್ಲಾ ಜಿಲ್ಲೆಯಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ನಡೆಸಲಾಗಿದೆ ಎಲ್ಲಾ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ನಮಗೆ ಹೊಂದಿಕೊಂಡಿರುತ್ತದೆ. ಎಲ್ಲಾ ವೈದ್ಯಕೀಯ ಕಾಲೇಜಿನಲ್ಲಿ150- 200 ಹಾಸಿಗೆಯುಳ್ಳ ವಲಯ ಮಾಡುತ್ತೇವೆ. ರೋಗ ಹೆಚ್ಚಾದವರಿಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆ ಬಿಟ್ಟು ಸರ್ಕಾರದ ಇತರೆ ಖಾಲಿ ಇರುವ ಕಟ್ಟಡಗಳನ್ನು ಬಳಕೆ ಮಾಡುತ್ತೇವೆ. ಇದರಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಹೆಚ್ಚಿನ ಭತ್ಯೆ, ಇನ್ಸುರೆನ್ಸ್ ಸೇರಿದಂತೆ ಹಲವು ಸೌಲಭ್ಯ ನೀಡುವುದಾಗಿ ಹೇಳಿದರು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು ವಿಧಾನಸೌಧದಲ್ಲಿ ತುರ್ತು ಸಭೆ ನಡೆಸಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಕೆಲ ಅಧಿಕಾರಿಗಳು ಮಾಸ್ಕ್ ಧರಿಸಿ ಸಭೆಯಲ್ಲಿ ಹಾಜರಾಗಿದ್ದರು. ಸಭೆಯಲ್ಲಿ ವೈರಸ್ ಹರಡದಂತೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com