ಹಳಿಗಳ ಮೇಲೆ ಸಾವಿನ ದುರಂತ ತಪ್ಪಿಸಲು ನೈಋತ್ಯ ರೈಲ್ವೆನಿಂದ 'ಆಪರೇಷನ್ ಲೈಫ್‌ಲೈನ್' ಪ್ರಾರಂಭ

ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ರೈಲ್ವೆ ಹಳಿ ಹಾಗೂ ನಿಲ್ದಾಣಗಳಲ್ಲಿ ಮರುಕಳಿಸುವ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ  ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ನಗರದಲ್ಲಿ ‘ಆಪರೇಷನ್ ಲೈಫ್‌ಲೈನ್’ ಅನ್ನು ಪ್ರಾರಂಭಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ರೈಲ್ವೆ ಹಳಿ ಹಾಗೂ ನಿಲ್ದಾಣಗಳಲ್ಲಿ ಮರುಕಳಿಸುವ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ  ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ನಗರದಲ್ಲಿ ‘ಆಪರೇಷನ್ ಲೈಫ್‌ಲೈನ್’ ಅನ್ನು ಪ್ರಾರಂಭಿಸಿದೆ.

ರೈಲ್ವೆ ಹಳಿಗಳ ಮೇಲೆ ಅತಿಕ್ರಮಣ ಎಸಗಿ ಯಾವುದೇ ಬಗೆಯ ದೇ ಅಪಾಯಕಾರಿ ಕೃತ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆಗೆ ಸಹಿ ಹಾಕುವಂತೆ  ಹಳಿಗಳ ಸಮೀಪ ಇರುವ ವಸತಿ ಸಮುಚ್ಚಯ ಕೊಳೆಗೇರಿಗಳಿಗೆ ಭೇಟಿ ನೀಡುವ ‘ಸಂಪರ್ಕ ಅಧಿಕಾರಿಗಳ’ ನೇಮಕವನ್ನು ಈ ಅಭಿಯಾನ ಒಳಗೊಂಡಿದೆ.

2019 ರ ಡಿಸೆಂಬರ್ 1 ರಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸಂಸತ್ತಿನಲ್ಲಿ ಬೆಂಗಳೂರು ಸಂಸದ ಪಿ ಸಿ ಮೋಹನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇವಲ ಒಂಬತ್ತು ತಿಂಗಳಲ್ಲಿ (ಜನವರಿಯಿಂದ ಸೆಪ್ಟೆಂಬರ್ ವರೆಗೆ) ಈ ಪ್ರದೇಶದಲ್ಲಿ ನಡೆದ ಸಾವಿನ ಪ್ರಕರಣಗಳ ಬಗೆಗೆ ಮಾತನಾಡಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ (ಎಸ್‌ಆರ್‌ಡಿಸಿ), ಆರ್‌ಪಿಎಫ್, ಬೆಂಗಳೂರು, ದೇಬಶ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ, ರೈಲ್ವೆ ಹಳಿಗಳ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಂಪರ್ಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ, ಅಲ್ಲಿ ಜನರ ಅಜಾಗರೂಕತೆಯಿಂದಾಗಿ ಅಪಘಾತಗಳು ಮರುಕಳಿಸುತ್ತಿವೆ. ನಾವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ, ಅವರನ್ನು ನಮ್ಮ ಸಂಪರ್ಕ ಅಧಿಕಾರಿಗಳನ್ನಾಗಿ ಮಾಡಲು ಮತ್ತು ಅವರ ಸಭೆಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ನಮಗೆ ಸಹಾಯ ಮಾಡಲು ವಿನಂತಿಸಿದ್ದೇವೆ ಎಂದಿದ್ದಾರೆ.

ಕೆಲ ಸೂಕ್ಷ್ಮ ಸ್ಥಳಗಳಲ್ಲಿ ಮನೆ-ಮನೆಗೆ ಅಭಿಯಾನಗಳನ್ನು ಯೋಜಿಸುವ ಮೂಲಕ ಮತ್ತು ಪ್ರತಿಜ್ಞೆಗೆ ಸಹಿ ಹಾಕುವಂತೆ ಜನರನ್ನು ಮನವೊಲಿಸುವ ಮೂಲಕ, ನಾವು ಅವರಲ್ಲಿ ಸ್ವಯಂ-ಶಿಸ್ತಿನ ಪ್ರಜ್ಞೆಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬ್ಯಾನರ್ಜಿ ಹೇಳಿದರು "ಕಲ್ಲು ತೂರಾಟ ಮತ್ತು ಹಳಿಗಳ ಮೇಲೆ ಅತಿಕ್ರಮಣ ಮುಂತಾದ ಅಪಾಯಕಾರಿ ಕೃತ್ಯಗಳನ್ನು ನಿಲ್ಲಿಸಲು ಜನರ ಮನೋಭಾವನೆ ಬದಲಾಗಬೇಕಾದ ಅಗತ್ಯವಿದೆ. ಮುಂದಿನ ತಿಂಗಳುಗಳಲ್ಲಿ ಶಾಲೆ,  ಕಾಲೇಜುಗಳಿಗೆ ಭೇಟಿ ನೀಡಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವಿಷಯಗಳನ್ನು ಹೈಲೈಟ್ ಮಾಡಲು ಆರ್‌ಪಿಎಫ್ ಯೋಜಿಸಿದೆ. ಎಂದಿದ್ದಾರೆ.

ಬೆಂಗಳೂರು ನಗರ ಮತ್ತು ನಾಯಂಡನಹಳ್ಲಿ, ಯಶವಂತಪುರ-ಚಿಕ್ಕಬಾಣಾವರ, ದೇವನಗೋಂತಿ-ವೈಟ್‌ಫೀಲ್ಡ್, ದೇವನಗೋಂತಿ-ಮಾಲೂರುಚನ್ನಪಟ್ಟಣ- ಶೆಟ್ಟಿಹಳ್ಳಿ, ಹೂಡಿ-ಕೃಷ್ಣರಾಜಪುರಂ ಮತ್ತು ಹೀಲಾಲೀಗಿ-ಆನೆಕಲ್ ವಿಭಾಗಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com