ಬೆಂಗಳೂರು: ಮೊದಲ ರಾತ್ರಿಗೂ ಮೊದಲೇ ಬಂತು ಪತ್ನಿಯ ರಾಸಲೀಲೆ ವಿಡಿಯೋ, ಪತ್ನಿಯ ಕಾಮದಾಟ ಕಂಡು ದಂಗಾದ ಪತಿ!

ಬಾಳ ಸಂಗಾತಿ ಜೊತೆ ಸುಖಸಂಸಾರ ನಡೆಸಬೇಕೆಂದು ಹಲವು ಕನಸುಗಳನ್ನು ಕಟ್ಟಿಕೊಂಡು ಬಯಸಿ ಬಯಸಿ ಮದುವೆಯಾಗಿದ್ದ ನವವರನಿಗೆ ತನ್ನ ಮೊದಲ ರಾತ್ರಿಗೂ ಮೊದಲೇ ತಾನು ಮದುವೆಯಾಗಿದ್ದ ಪತ್ನಿಯ ರಾಸಲೀಲೆ ವಿಡಿಯೋ ಕಂಡು ದಂಗಾದಿದ್ದಾನೆ. 

Published: 16th March 2020 06:42 PM  |   Last Updated: 16th March 2020 06:42 PM   |  A+A-


Representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಬೆಂಗಳೂರು: ಬಾಳ ಸಂಗಾತಿ ಜೊತೆ ಸುಖಸಂಸಾರ ನಡೆಸಬೇಕೆಂದು ಹಲವು ಕನಸುಗಳನ್ನು ಕಟ್ಟಿಕೊಂಡು ಬಯಸಿ ಬಯಸಿ ಮದುವೆಯಾಗಿದ್ದ ನವವರನಿಗೆ ತನ್ನ ಮೊದಲ ರಾತ್ರಿಗೂ ಮೊದಲೇ ತಾನು ಮದುವೆಯಾಗಿದ್ದ ಪತ್ನಿಯ ರಾಸಲೀಲೆ ವಿಡಿಯೋ ಕಂಡು ದಂಗಾದಿದ್ದಾನೆ. 

ಹಳೆಯ ಪ್ರೇಮದ ಕಥೆಯನ್ನು ಮುಚ್ಚಿಟ್ಟು ವಿವಾಹವಾಗಿ ವಂಚಿಸಿರುವ ಚಿಕ್ಕಮಗಳೂರಿನ ನ್ಯಾಯಾಲಯವೊಂದರಲ್ಲಿ ಟೈಪಿಸ್ಟ್ ಆಗಿರುವ ಪತ್ನಿ ಹಾಗೂ ಕುಟುಂಬಸ್ಥರ ವಿರುದ್ಧ ಪತಿ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

2019ರ ಜೂನ್ 30ರಂದು ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಬಳಿಕ ನವೆಂಬರ್ 24ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಲಾಗಿತ್ತು. ಮದುವೆ ಬಳಿಕ 10 ದಿನ ಮಾತ್ರ ಪತ್ನಿ ತನ್ನೊಂದಿಗಿದ್ದಳು. ಡಿ. 12ರಂದು ತಿಪಟೂರಿನಲ್ಲಿ ಬೀಗರೂಟವನ್ನು ಆಯೋಜಿಸಿದ್ದ ಕಾರಣ ಆಕೆಯನ್ನು ತವರು ಮನೆಯಲ್ಲೇ ಬಿಟ್ಟಿದ್ದೆ. ಡಿ. 15ರಂದು ನಮ್ಮ ಮೊದಲ ರಾತ್ರಿ ನಿಗದಿಯಾಗಿತ್ತು. 

ಆದರೆ ಇನ್ನು ಎರಡು ದಿನ ಇರುವಂತೆ ಫೇಸ್ ಬುಕ್ ಮೆಸೆಂಜರ್ ನಲ್ಲಿ ನನ್ನ ಪತ್ನಿಯ ನಗ್ನ ಫೋಟೋ ಮತ್ತು ವಿಡಿಯೋಗಳು ಬಂದಿತ್ತು. ಈ ಬಗ್ಗೆ ನಾನು ಆನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಆತ ಮದುವೆಗೂ ಮುನ್ನ ನಾವಿಬ್ಬರು ಪ್ರೀತಿಸುತ್ತಿದ್ದು ಏಕಾಂತದಲ್ಲಿ ಕಾಲ ಕಳೆದಿದ್ದಾಗಿ ಹೇಳಿದ್ದ. ಅಲ್ಲದೆ 7 ವರ್ಷಗಳಿಂದ ನಾವಿಬ್ಬರು ಪ್ರೀತಿಸುತ್ತಿದ್ದು ಹೆತ್ತವರ ಬಲವಂತಕ್ಕಾಗಿ ನಿಮ್ಮನ್ನು ಮದುವೆಯಾಗಿರುವುದಾಗಿ ಆತ ನನಗೆ ಹೇಳಿದ್ದ ಎಂದು ನವವರ ದೂರಿನಲ್ಲಿ ತಿಳಿಸಿದ್ದಾನೆ. 

ಈ ದೂರಿನನ್ವಯ ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp