ನಟ ವಿಜಯ್ ದೇವರಕೊಂಡ ಮನವೊಲಿಕೆಗಾಗಿ ಸುಧಾ ಮೂರ್ತಿ ಸಹಿ ನಕಲಿ ಮಾಡಿದ್ದ ಕರ್ನಾಟಕದ ಟೆಕ್ಕಿ ಬಂಧನ!

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಸಹಿಯನ್ನು ನಕಲಿ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ 23 ವರ್ಷದ ಟೆಕ್ಕಿ(ಐಟಿ ಉದ್ಯೋಗಿ)ಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Published: 16th March 2020 06:08 PM  |   Last Updated: 16th March 2020 06:08 PM   |  A+A-


Sudha murthy-vijay devarakonda

ಸುಧಾಮೂರ್ತಿ-ವಿಜಯ್ ದೇವರಕೊಂಡ

Posted By : Vishwanath S
Source : UNI

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಸಹಿಯನ್ನು ನಕಲಿ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ 23 ವರ್ಷದ ಟೆಕ್ಕಿ(ಐಟಿ ಉದ್ಯೋಗಿ)ಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ತೆಲುಗು ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರು ತಮ್ಮ ಮೊಬೈಲ್ ಆಪ್‍ನ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮನವೊಲಿಸುವ ಸಲುವಾಗಿ ಸುಧಾ ಮೂರ್ತಿ ಅವರ ಸಹಿಯನ್ನು ನಕಲಿ ಮಾಡಿದ್ದ ಆರೋಪಿ ಎಲ್ ಸಾಯಿಕೃಷ್ಣ ನನ್ನು ಪೊಲೀಸರು ಬಂಧಿಸಿದ್ದಾರೆ. 

ಸುಧಾ ಮೂರ್ತಿ ಅವರ ಹೆಸರನ್ನು ಬಳಸಿದರೆ ತನ್ನ ಆಪ್‍ ಗೆ ರಾಯಬಾರಿಯಾಗಲು ದೇವರಕೊಂಡ ಅವರನ್ನು ಮನವೊಲಿಸಲು ಸುಲಭವಾಗುತ್ತದೆ ಎಂದು ಭಾವಿಸಿದ್ದಾಗಿ ಸಾಯಿಕೃಷ್ಣ ಪೊಲೀಸರಿಗೆ ತಿಳಿಸಿದ್ದಾನೆ.

ನಟನಿಗೆ ಪತ್ರ ಬಂದಾಗ ಆತನ ಸಿಬ್ಬಂದಿ ಅದರಲ್ಲಿ ಏನೋ ತಪ್ಪು ಇದೆ ಎಂದು ಭಾವಿಸಿ ತಕ್ಷಣ ಇನ್ಫೋಸಿಸ್ ಪ್ರತಿಷ್ಠಾನ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ತಕ್ಷಣ ಪ್ರತಿಷ್ಠಾನ ಪೊಲೀಸರಿಗೆ ದೂರು ನೀಡಿದ್ದರಿಂದ ಸಾಯಿಕೃಷ್ಣನನ್ನು ಬಂಧಿಸಲು ಸಾಧ್ಯವಾಗಿದೆ.

Stay up to date on all the latest ರಾಜ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp