ತುಮಕೂರು: ಪತಿ-ಪತ್ನಿಯರ ಜಗಳ ಬಿಡಿಸಲು ಹೋದ ನಾದಿನಿಯ ಕೈ ಕಟ್!

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೇವಲ ಒಂದೆರಡು ವಾರಗಳು ಬಾಕಿ ಇರುವಾಗ, ಮಧುಗಿರಿ ಬಳಿಯ ಡಿವಿ ಹಳ್ಳಿಯ ಮೇಘನಾ (16) ತನ್ನದಲ್ಲದ ತಪ್ಪಿಗೆ ಎಡಗೈಯನ್ನು ಕಳೆದುಕೊಂಡು ದುಃಖ ಅನುಭವಿಸುವಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೇವಲ ಒಂದೆರಡು ವಾರಗಳು ಬಾಕಿ ಇರುವಾಗ, ಮಧುಗಿರಿ ಬಳಿಯ ಡಿವಿ ಹಳ್ಳಿಯ ಮೇಘನಾ (16) ತನ್ನದಲ್ಲದ ತಪ್ಪಿಗೆ ಎಡಗೈಯನ್ನು ಕಳೆದುಕೊಂಡು ದುಃಖ ಅನುಭವಿಸುವಂತಾಗಿದೆ.

ತನ್ನ ಅಕ್ಕನನ್ನು ಆಕೆಯ ಪತಿ, ಸೋದರ ಮಾವ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸುತ್ತಿದ್ದ ವೇಳೆ ಅದನ್ನು ತಡೆಯಲು ಹೋದ ಮೇಘನಾ  ತನ್ನ ಎಡಗೈನ ಒಂದು ಭಾಗವನ್ನು ಕಳೆದುಕೊಳ್ಳಬೇಕಾಯಿತು. ಸೋದರಮಾವ ಹನುಮಂತ ಅಕ್ಕ ಅನಿತಾಳನ್ನು ಹೊಡೆಯುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಮೇಘನಾ ಎಡಗೈನ ಅಂಗೈಗೆ ಬಲವಾದ ಹೊಡೆತ ಬಿದ್ದು ಅಂಗೈನ ಒಂದು ಭಾಗ ತುಂಡಾಗಿದೆ. 

ಘಟನೆ ಆದ ತಕ್ಷಣ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದೀಗ ವೈದ್ಯರು ಕತ್ತರಿಸಲ್ಪಟ್ಟ ಅಂಗೈಯನ್ನು ಜೋಡಿಸುವ ಪ್ರಯತ್ನದಲ್ಲಿದ್ದಾರೆ. "ಆಕೆಯ ಕೈ ಮೊದಲಿನಂತಾಗುವುದು ಅನುಮಾನ" ವೈದ್ಯರು ಹೇಳಿದ್ದಾರೆ. ಹಾಗಾಗಿ ಆಕೆ ಚೇತರಿಸಿಕೊಂಡು ಈ ವರ್ಷದ ಪರೀಕ್ಷೆ ಬರೆಯಲು ಸಾಧ್ಯವೆ ಎನ್ನುವುದು ಖಚಿತವಾಗಿಲ್ಲ.

ಮೇಘನಾ ತಾಯಿ ಜೀವನೋಪಾಯಕ್ಕಾಗಿ ಬೀಡಿ ಕಟ್ಟುತ್ತಾರೆ. ತಂದೆ ತಿಪ್ಪೇಸ್ವಾಮಿ ಪಟ್ಟಣದ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಆಕೆಯ ಸೋದರಿ ತುಮಕೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳೆಂದು ಕುಟುಂಬದ ಸಮೀಪ ಬಂಧುಗಳು ಹೇಳಿದ್ದಾರೆ.

ಆರೋಪಿ ಹನುಮಂತ ಅನಿತಾಳನ್ನು ಮದುವೆಯಾಗಿ ಐದು ವರ್ಷ ಸಂಸಾರ ಮಾಡಿದ್ದ. ಇಬ್ಬರೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಆದರೆ ಅನಿತಾ ಊರಿಗೆ ಹಿಂತಿರುಗಿದ ನಂತರ ಹನುಮಂತ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ. ಇದೀಗ ಮಧುಗಿರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com