ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ವೈರಸ್: ಕಲಬುರಗಿಯಲ್ಲಿ ಮತ್ತೆ 4 ಶಂಕಿತರು, ಹೆಚ್ಚಿದ ಆತಂಕ

ಈಗಾಗಲೇ ಕೊರೋನಾ ಆತಂಕದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಿಂದ ಸೋಮವಾರ ಮತ್ತೆ ನಾಲ್ವರು ಶಂಕಿತ ಕೊರೋನಾ ಪೀಡಿತರ ಗಂಟಲು ದ್ರವದ ಮಾದರಿಯ್ನು ಬೆಂಗಳೂರು ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಕೊರೋನಾ ಸೋಂಕಿಗೆ ದೇಶದಲ್ಲೇ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಜಿಲ್ಲೆಯಲ್ಲಿ ಈಗ ಮತ್ತಷ್ಟು ಆತಂಕ ಹೆಚ್ಚಿದೆ. 

ಕಲಬುರಗಿ: ಈಗಾಗಲೇ ಕೊರೋನಾ ಆತಂಕದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಿಂದ ಸೋಮವಾರ ಮತ್ತೆ ನಾಲ್ವರು ಶಂಕಿತ ಕೊರೋನಾ ಪೀಡಿತರ ಗಂಟಲು ದ್ರವದ ಮಾದರಿಯ್ನು ಬೆಂಗಳೂರು ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಕೊರೋನಾ ಸೋಂಕಿಗೆ ದೇಶದಲ್ಲೇ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಜಿಲ್ಲೆಯಲ್ಲಿ ಈಗ ಮತ್ತಷ್ಟು ಆತಂಕ ಹೆಚ್ಚಿದೆ. 

ಕೊರೋನಾದಿಂದ ಬಲಿಯಾದ ಜಿಲ್ಲೆಯ ವೃದ್ಧರೊಬ್ಬರ ಪುತ್ರಿಗೂ ಆ ಸೋಂಕು ಹಬ್ಬಿದೆ ಎಂಬ ವಿಚಾರ ಶನಿವಾರವಷ್ಟೇ ಖಚಿತವಾಗಿತ್ತು. ಇದರ ಬೆನ್ನಲ್ಲೇ ಕೊರೋನಾದಿಂದ ಮೃತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಇಬ್ಬರು ಮತ್ತು ವಿದೇಶದಿಂದ ಬಂದ ಇಬ್ಬರು ಜ್ವರ, ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ನಾಲ್ವರು ಗಂಟಲ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದ. ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿರುವ ನಾಲ್ವರು ವ್ಯಕ್ತಿಗಳನ್ನು ಸದ್ಯ ಇಎಸ್ಐಸಿ ಆಸ್ಪತ್ರೆಯಲ್ಲಿರುವ ಐಸೋಲೇಷನ್ ವಾರ್ಡ್ ನಲ್ಲಿಟ್ಟು ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಈ ಹಿಂದೆ ಗುರುತಿಸಿದ 71 ವ್ಯಕ್ತಿಗಳ ಜೊತೆಗೆ 2ನೇ ಸಂಪರ್ಕ ಹೊಂದಿದ 238 ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಮರಳಿದ 61 ವ್ಯಕ್ತಿಗಳು ಸೇರಿ ಒಟ್ಟಾರೆ ಜಿಲ್ಲೆಯಲ್ಲಿ 370 ಮಂದಿಯನ್ನು ಕ್ವಾರಂಟೇನ್ ಮಾಡಲಾಗಿದೆ. ಅವರೆಲ್ಲರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com