ಗಂಗಾವತಿಯಲ್ಲಿ ಕೊರೋನಾ, ಆಸ್ಪತ್ರೆಗೆ ಹೋಗಬೇಡಿ ವದಂತಿ: ಸರ್ಕಾರಿ ವೈದ್ಯರಿಂದ ಠಾಣೆಗೆ ದೂರು

ನಗರದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ತಗುಲಿದೆ. ದಯವಿಟ್ಟು ಯಾರೂ ಆಸ್ಪತ್ರೆಗೆ ಹೋಗಬೇಡಿ ಎಂಬ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸಂದೇಶ ಹಿಡಿದು ಸರ್ಕಾರಿ ಆಸ್ಪತ್ರೆಯ ವೈದ್ಯರು ಠಾಣೆಯ ಮಟ್ಟಿಲೇರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಂಗಾವತಿ: ನಗರದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ತಗುಲಿದೆ. ದಯವಿಟ್ಟು ಯಾರೂ ಆಸ್ಪತ್ರೆಗೆ ಹೋಗಬೇಡಿ ಎಂಬ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸಂದೇಶ ಹಿಡಿದು ಸರ್ಕಾರಿ ಆಸ್ಪತ್ರೆಯ ವೈದ್ಯರು ಠಾಣೆಯ ಮಟ್ಟಿಲೇರಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ರೋಗಿ ದಾಖಲಾಗಿದ್ದಾರೆ. ಯಾರೂ ಆಸ್ಪತ್ರೆಗೆ ಹೋಗಬೇಡಿ ಎಂದು ವಾಟ್ಸಫ್ ನಲ್ಲಿ ಯುವಕನೊಬ್ಬ ವಾಯ್ಸ್ ಮೇಸೆಜ್ ಮಾಡಿ ಹರಿಯಬಿಟ್ಟಿದ್ದಾನೆ. 

ಜನರಲ್ಲಿ ಭೀತಿ ಉಂಟುಮಾಡುವ ಈ ಸಂದೇಶ ಸರ್ಕಾರಿ ಆಸ್ಪತ್ರೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲಾಗುತ್ತಿದೆ. ವಾಯ್ಸ್ ಮೇಸೆಜ್ ಮಾಡಿದವರ ಮೇಲೆ ಸೈಬರ್ ಕ್ರೈಂ ನಡಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವುಡಿ ದೂರು ನೀಡಿದ್ದಾರೆ.

-ಎಂ.ಜೆ. ಶ್ರೀನಿವಾಸ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com