ಚಿಕ್ಕೋಡಿ 5 ಜನ ಅಪಹರಣಕಾರರನ್ನು 30 ತಾಸುಗಳಲ್ಲಿ ಬಂಧಿಸಿದ ಪೊಲೀಸರು! 

5 ಜನ ಅಪಹರಣಕಾರರನ್ನು ಕೇವಲ 30ತಾಸುಗಳಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ.
ಚಿಕ್ಕೋಡಿ 5 ಜನ ಅಪಹರಣಕಾರರನ್ನು 30 ತಾಸುಗಳಲ್ಲಿ ಬಂಧಿಸಿದ ಪೊಲೀಸರು!
ಚಿಕ್ಕೋಡಿ 5 ಜನ ಅಪಹರಣಕಾರರನ್ನು 30 ತಾಸುಗಳಲ್ಲಿ ಬಂಧಿಸಿದ ಪೊಲೀಸರು!

ಚಿಕ್ಕೋಡಿ: 5 ಜನ ಅಪಹರಣಕಾರರನ್ನು ಕೇವಲ 30ತಾಸುಗಳಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿ ತಾಲ್ಲೂಕಿನ ಕೊಗನೋಳ್ಳಿ ಗ್ರಾಮದ ತಮ್ಮ ಸಂಬಂಧಿಕರ ಮನೆಯಲ್ಲಿ ಮದುವೆಯ ನಿಶ್ಚಿತಾರ್ಥದ ಕಾರ್ಯ ನಿಮಿತ್ತ ಆಗಮಿಸಿದ ಮಹಾರಾಷ್ಟ್ರ ರಾಜ್ಯದ ಇಚಲಕರಂಜಿಯ ಶಬ್ಬೀರ ಬಾಬಾಲಾಲ ಮಕಾನದಾರ ಎಂಬುವರನ್ನು ಸಾಯಂಕಾಲ ತಮ್ಮ ಊರಿಗೆ ಮರಳುವ ಸಮಯದಲ್ಲಿ ಕೊಗನೊಳ್ಳಿ ಗ್ರಾಮದಿಂದ ಅಪಹರಣ ಮಾಡಲಾಗಿತ್ತು.

ಅಪಹರಣವಾಗಿದ್ದ ಶಬ್ಬೀರ ಬಾಬಾಲಾಲ ಮಕಾನದಾರ ಮಗನಾದ ಸಮೀರ ಎಂಬುವರು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಮನೋಜ್ ಕುಮಾರ್ ನಾಯಕ ನೇತೃತ್ವದಲ್ಲಿ ಸಿಪಿಐ ಸಂತೋಷ ಸತ್ಯನಾಯಕ, ಪಿಎಸ್ಐಗಳಾದ ಕುಮಾರ್ ಹಾಡಕರ, ಬಿ.ಎಸ್ ತಳವಾರರವರ ತಂಡಗಳನ್ನು ರಚಿಸಿ ಕೇವಲ 30ಘಂಟೆಗಳಲ್ಲಿ ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಕಳಂಭವಾಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ರಫೀಕ ದಸ್ಗೀರ ನದಾಪ, ಮುಜಪ್ಪರ ಅಲ್ತಾಪ್ ಸೈಯದ್, ರೋಹನ ಅಶೋಕ ಖವರೆ, ತುಕಾರಾಂ ತಾನಾಜಿ ಲಾಂಬೋಲೆ (ಇವರೆಲ್ಲರೂ ಕೊಲ್ಹಾಪುರ ನಗರದವರು) ಹಾಗೂ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದ ರಜತ ಅಲ್ಲಾವುದ್ದೀನ್ ನದಾಫ ಬಂಧಿತರು. 

ಈಪ್ರಕರಣದಲ್ಲಿ ಪ್ರಮುಖ ಆರೋಪಿತನಾದ ಹಿದಾಯತ ಶಿಕಂದರ ಬಾಗವಾನ ಪರಾರಿಯಾಗಿದ್ದಾನೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಇನೋವಾ ಕಾರ್ (ನಂಬರ MH-12 CR-7579) ವಶಪಡಿಸಿಕೊಂಡಿದ್ದಾರೆ.

ಅಪರಹರಣಕ್ಕೊಳಗಾದ ವ್ಯಕ್ತಿ ಶಬ್ಬೀರ ಮತ್ತು ಈ ಪ್ರಕರಣದಲ್ಲಿ ಪ್ರಮುಖ ಆರೋಪಿತನಾದ ಹಿದಾಯತ ಶಿಕಂದರ ಬಾಗವಾನ ಇವರ ನಡುವೆ ಹಣಕಾಸಿನ ವ್ಯವಹಾರದ ಸಲುವಾಗಿ ಆರೋಪಿತರಿಗೆ ಸುಫಾರಿ ನೀಡಿ ಅಪಹರಣ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಚುರುಕಿನ ಕಾರ್ಯಾಚರಣೆಯಲ್ಲಿ ಎಎಸ್ಐಎಸ್ಎ ತೊಲಗಿ, ಸಿಬ್ಬಂದಿಗಳಾದ ಮಾರುತಿ ಖಾನಪ್ಪನವರ, ಪ್ರಕಾಶ ಸಾವೋಜಿ, ಸಂಜು ಕಾಡಗೌಡ, ನಾಗಪ್ಪ ಸಗರೆಕರ, ವಿಜಯ ಪಾಟೀಲ್, ಕಾಳಪ್ಪ ಬಡಿಗೇರ, ರಾಜು ದಿವಟೆ, ರಾಜು ಕೋಳಿ, ಶ್ರೀಶೈಲ ಗಳತಗಿ, ಲಕ್ಷ್ಮಣ ಕೊಚರಿ, ಅಮರ ಚಂದನಶಿವೆ, ರವಿ ಡಂಗ, ಮುತ್ತಣ್ಣ ತೇರದಾಳ, ಮಾರುತಿ ಕಾಂಬಳೆ, ಉದಯ ಕಾಂಬಳೆ, ಮಹೇಶ್ ಪೂಜಾರಿ ಸಕ್ರಿಯರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com