'ನಾವು ಈ ರಾಜ್ಯದ ಜನ ಅಲ್ಲವೇ: ಕೋಲಾರ-ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಸಿ'

ನಾವು ಈ ರಾಜ್ಯದ ಜನ ಅಲ್ಲವೇ? ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಿ ಎಂದು ಕಾಂಗ್ರೆಸಿನ ಹಿರಿಯ ಸದಸ್ಯ ಕೆ.ಆರ್. ರಮೇಶ್‌ ಕುಮಾರ್ ಒತ್ತಾಯಿಸಿದ್ದಾರೆ.
ರಮೇಶ್ ಕುಮಾರ್
ರಮೇಶ್ ಕುಮಾರ್

ಬೆಂಗಳೂರು: ನಾವು ಈ ರಾಜ್ಯದ ಜನ ಅಲ್ಲವೇ? ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಿ ಎಂದು ಕಾಂಗ್ರೆಸಿನ ಹಿರಿಯ ಸದಸ್ಯ ಕೆ.ಆರ್. ರಮೇಶ್‌ ಕುಮಾರ್ ಒತ್ತಾಯಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಮಸಾಲೆ ಜಯರಾಮ್ ಕೇಳಿದ ಪ್ರಶ್ನೆಗೆ ಆಕ್ಷೇಪಿಸಿದ ಅವರು, 'ನೀರು ನೀಡುವುದಿಲ್ಲ ಎಂದರೆ ಯೋಜನೆಗೆ ಭೂಮಿ ಕೊಡುವುದಿಲ್ಲ ಎನ್ನುವುದು ಏನು ತಮಾಷೆ ವಿಚಾರವೇ? ಎಂದು ಪ್ರಶ್ನಿಸಿದರು.

ಈ ಯೋಜನೆಗೆ ಸಿಗುವುದು 24 ಟಿಎಂಸಿ ಅಡಿ ನೀರು. ಬರದಿಂದ ತತ್ತರಿಸಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ 8 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಆದರೆ, ಒಂದೇ ಒಂದು ತೊಟ್ಟು ನೀರು ಇಲ್ಲಿಯವರೆಗೆ ಬಂದಿಲ್ಲ.

ಬೆಂಗಳೂರಿನ ಕೊಳಚೆ ನೀರನ್ನಾದರೂ ಶುದ್ಧೀಕರಿಸಿ ಕೊಡಿ ಎಂದು ನಾವು ದಯನೀಯವಾಗಿ ಬೇಡುತ್ತಿದ್ದೇವೆ. ಹೀಗಿದೆ ನಮ್ಮ ಪರಿಸ್ಥಿತಿ. ಆದರೆ, ಯೋಜನೆ ಅನುಷ್ಠಾನಕ್ಕೆ ಮುನ್ನವೇ ಬೇರೆ ಬೇರೆ ಜಿಲ್ಲೆಯವರು ಬೇಡಿಕೆ ಮಂಡಿಸುತ್ತಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಸೂಚ್ಯವಾಗಿ  ರಮೇಶ್ ಕುಮಾರ್ ಹೇಳಿದರು.

ಗೋವಿಂದ ಕಾರಜೋಳ, ‘ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನಮ್ಮ ಜಿಲ್ಲೆಯ ಜನರು ಜಾಗ ಬಿಟ್ಟುಕೊಟ್ಟಿದ್ದಾರೆ. ನಾವೇನೂ ಈ ರೀತಿ ಬೆದರಿಕೆ ಹಾಕಿದ್ದೇವೆಯೇ? ಶರಾವತಿ ಯೋಜನೆಯಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಅವರು ಈ ರೀತಿ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com