ಕೊರೋನಾ ವೈರಸ್: ವಿದೇಶದಿಂದ ಬರುವ ಪ್ರಯಾಣಿಕರಿಗೆ ಮುದ್ರೆ

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುವ ಕೊರೋನಾ ಶಂಕಿತ ಸಿ-ವರ್ಗದ ಪ್ರಯಾಣಿಕರಿಗೆ ಕಡ್ಡಾಯ ಸ್ಕ್ರೀನಿಂಗ್ ಮತ್ತು ಸ್ಟಾಂಪಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಕ್ಯಾಟಗರಿ ಪ್ರಯಾಣಿಕರಿಗೆ ಮುದ್ರೆ ಒತ್ತಿ ಕಳುಹಿಸಲಾಗುತ್ತಿದೆ
ವಿಮಾನ ನಿಲ್ದಾಣ
ವಿಮಾನ ನಿಲ್ದಾಣ

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುವ ಕೊರೋನಾ ಶಂಕಿತ ಸಿ-ವರ್ಗದ ಪ್ರಯಾಣಿಕರಿಗೆ ಕಡ್ಡಾಯ ಸ್ಕ್ರೀನಿಂಗ್ ಮತ್ತು ಸ್ಟಾಂಪಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಕ್ಯಾಟಗರಿ ಪ್ರಯಾಣಿಕರಿಗೆ ಮುದ್ರೆ ಒತ್ತಿ ಕಳುಹಿಸಲಾಗುತ್ತಿದೆ

ವಿದೇಶದಿಂದ ಸ್ವದೇಶಕ್ಕೆ ಬರುವ ಕೊರೋನಾ ಶಂಕಿತರಿಗೆ ಸ್ಕ್ರೀನಿಂಗ್ ಮತ್ತು ಸ್ಟಾಂಪಿಂಗ್ ವ್ಯವಸ್ಥೆ ಮಾಡಿದ್ದು, ಇಂದು ಬಂದಿರುವ ಪ್ರಯಾಣಿಕರು ಏಪ್ರಿಲ್ 3 ರ ವರೆಗೆ ಮನೆಯಲ್ಲಿಯೇ ಪ್ರತ್ಯೇಕ ಚಿಕಿತ್ಸೆ ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ

ಕಳೆದ ರಾತ್ರಿಯಿಂದ ಬಂದ 226 ಸಿ-ವರ್ಗದ ಪ್ರಯಾಣಿಕರಿಗೆ ದಿನಾಂಕ ಸಮೇತ ಬಲಗೈಗೆ ಸ್ಟಾಂಪಿಂಗ್ ಹಾಕಿ ಮನೆಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಕಳೆದ ಮಾರ್ಚ್ 13 ರಿಂದ ಇಲ್ಲಿಯವರೆಗೆ ವಿದೇಶಗಳಿಂದ ಬಂದ 744 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. 744 ಪ್ರಯಾಣಿಕರಲ್ಲಿ ಎ-ವರ್ಗದಲ್ಲಿ 11, ಬಿ-ವರ್ಗದಲ್ಲಿ 28 ಇದ್ದು ಅದರಲ್ಲಿ ಸಿ-ವರ್ಗದ 704 ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದು ಅವರ ವಾಸಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ತಿಳಿಸಿದ್ದಾರೆ

ವಿದೇಶದಿಂದ ಬಂದವರ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಲ್ಲಿ ಚಿಕಿತ್ಸೆಗೆ ಆಗಮಿಸುವಂತೆ ಸೂಚಿಸಲಾಗಿದೆ. ಬಿ-ವರ್ಗದಲ್ಲಿ 17 ಪ್ರಯಾಣಿಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೂ ಸೋಂಕು ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com