ಕೊರೋನಾ ಭೀತಿಯಲ್ಲೂ ಲಾಭದ ಆಸೆ: ಸಿಸಿಬಿಯಿಂದ 50 ಲಕ್ಷ ರೂ ಮೌಲ್ಯದ ನಕಲಿ ಸ್ಯಾನಿಟೈಸರ್ಸ್ ವಶ!

ಇಡೀ ದೇಶವೇ ಕೊರೋನಾ ಭೀತಿಯಲ್ಲಿ ಮುಳುಗಿರುವಾಗ ಇತ್ತ ಕೆಲ ದುಷ್ಕರ್ಮಿಗಳು ಮಾತ್ರ ಈ ಪರಿಸ್ಥಿತಿಯ ಲಾಭ ಪಡೆದು ನಕಲಿ ಸ್ಯಾನಿಟೈಸರ್ಸ್ ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.
ನಕಲಿ ಸ್ಯಾನಿಟೈಸರ್ ಗಳು ವಶ
ನಕಲಿ ಸ್ಯಾನಿಟೈಸರ್ ಗಳು ವಶ

ಬೆಂಗಳೂರು: ಇಡೀ ದೇಶವೇ ಕೊರೋನಾ ಭೀತಿಯಲ್ಲಿ ಮುಳುಗಿರುವಾಗ ಇತ್ತ ಕೆಲ ದುಷ್ಕರ್ಮಿಗಳು ಮಾತ್ರ ಈ ಪರಿಸ್ಥಿತಿಯ ಲಾಭ ಪಡೆದು ನಕಲಿ ಸ್ಯಾನಿಟೈಸರ್ಸ್ ತಯಾರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ನಗರದಲ್ಲಿ ನಕಲಿ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ವೇಳೆ ಸುಮಾರು 56 ಲಕ್ಷ ರೂ ಮೌಲ್ಯದ ನಕಲಿ ಸ್ಯಾನಿಟೈಸರ್ ಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಚಾಮರಾಜಪೇಟೆ ಸಮೀಪದ ಜ್ಯೋತಿ ಕೆಮಿಕಲ್ಸ್ ಹಾಗೂ ಸ್ವಾತಿ ಆ್ಯಂಡ್ ಕಂಪನಿಗಳ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಕಲಿ ಸ್ಯಾನಿಟೈಸರ್ ಗಳ ತಯಾರಿಸುತ್ತಿದ್ದ ಆರೋಪದ ಮೇರೆಗೆ ರಾಜು ಹಾಗೂ ಚಂದನ್ ಎಂಬುವವರನ್ನು ಬಂಧಿಸಲಾಗಿದೆ. 

ಗೋದಾಮಿನಲ್ಲಿ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಂಡ್‌ ರಬ್ ಸಿದ್ದಪಡಿಸಲಾಗುತ್ತಿತ್ತು. ದಾಳಿ ವೇಳೆ ಒಟ್ಟು 280 ಲೀಟರ್ ಸ್ಯಾನಿಟೈಸರ್, 4500 ಸ್ಟಿಕರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 50 ಲೀಟರ್ isoproyl alcoholಗೆ ಒಂದು ಸ್ಪೂನ್ brilliant blue colour ಹಾಗೂ ಒಂದು ಸ್ಪೂನ್‌ perfumne ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ಲೈಸೆನ್ಸ್​ ಮತ್ತು ವೈಜ್ಞಾನಿಕ ಅನುಮತಿ ಇಲ್ಲದೆ ಸ್ಯಾನಿಟೈಸರ್ ಗಳ ತಯಾರಿಸಲಾಗುತ್ತಿತ್ತು. ಹೀಗೆ ತಯಾರಿಸಲಾದ ಸ್ಯಾನಿಟೈಸರ್ ಗಳನ್ನು ಪ್ಲಾಸ್ಟಿಕ್ ಡಬ್ಬಗಳಿಗೆ ತುಂಬಿ  ರಟ್ಟಿನ ಬಾಕ್ಸ್​ಗಳಲ್ಲಿ ಪ್ಯಾಕ್ ಮಾಡಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.  

ಹತ್ತು ಪಟ್ಟು ದುಬಾರಿ ಲಾಭಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿಗಳನ್ನು ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಹಾಗೂ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com