ಕೊರೋನಾವೈರಸ್: ಕೊಡಗಿನ ಕೊಂಡಂಗೇರಿ ಗ್ರಾಮಕ್ಕೆ ಪ್ರವೇಶ ನಿಷೇಧ, ಕುತ್ತಿಮೊಟ್ಟೆಯನ್ನು ಅತೀಸೂಕ್ಷ್ಮ ಪ್ರದೇಶವೆಂದು ಘೋಷಣೆ

ಕೊಡಗು ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಇದೀಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಲ್ತ್ ಎಮರ್ಜೆನ್ಸಿ ಘೋಷಿಸಿ ಮುಂಜಾಗ್ರತಾ ಕ್ರಮವಾಗಿ ಮಾ.31ರವರೆಗೂ 144/3 ಸೆಕ್ಷನ್ ಜಾರಿಗೊಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಇದೀಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಲ್ತ್ ಎಮರ್ಜೆನ್ಸಿ ಘೋಷಿಸಿ ಮುಂಜಾಗ್ರತಾ ಕ್ರಮವಾಗಿ ಮಾ.31ರವರೆಗೂ 144/3 ಸೆಕ್ಷನ್ ಜಾರಿಗೊಳಿಸಿದೆ. 

ಅಲ್ಲದೆ, ಸೋಂಕು ತಗುಲಿರುವ ವ್ಯಕ್ತಿಯ ಮನೆಯಿರುವ ಮೂರ್ನಾಡು ಬಳಿಯ ಕೊಂಡಂಗೇರಿ ಗ್ರಾಮಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಇಲ್ಲಿನ ಕುತ್ತಿಮೊಟ್ಟೆಯನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿ, ಅಗತ್ಯ ಕ್ರಮ ಕೈಗೊಂಡಿದೆ. 

ಸೋಂಕಿತನ ಮನೆಯಿರುವ ಕೊಂಡಂಗೇರಿ ಗ್ರಾಮದ ಕುತ್ತಿಮೊಟ್ಟೆಯ 500 ಮೀ. ವ್ಯಾಪ್ತಿ ಪ್ರದೇಶವನ್ನು ಕಂಟೋನ್ಮಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 75 ಕುಟುಂಬದ 306 ಮಂದಿ ಇದ್ದು, ಯಾರೂ ಮನೆಯಿಂದ ಹೊರಬರುವಂತಿಲ್ಲ. ಎಲ್ಲರಿಗೂ ಊಟ ಉಪಹಾರಗಳ ವ್ಯವಸ್ಥೆಯನ್ನೂ ಸರ್ಕಾರದ ವತಿಯಿಂದಲೇ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಕೊಂಡಂಗೇರಿ ಗ್ರಾಮದ 5 ಕಿಮೀ ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದ್ದು, ಈ ವ್ಯಾಪ್ತಿಯೊಳಗಿರುವವರು ಗ್ರಾಮದಿಂದ ಹೊರಬರುವಂತಿಲ್ಲ. ಅದೇ ರೀತಿ ಹೊರಗಿನವರು ಗ್ರಾಮಕ್ಕೆ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com