ದಾವಣಗೆರೆ: ಈ ಗ್ರಾಮದಲ್ಲಿ ರಸ್ತೆ ಬದಿಯೇ ಮೃತದೇಹಗಳ ಸಮಾಧಿ, ದಹನ!

ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

Published: 20th March 2020 03:50 PM  |   Last Updated: 20th March 2020 04:22 PM   |  A+A-


Posted By : Sumana Upadhyaya
Source : The New Indian Express

ದಾವಣಗೆರೆ:ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ಮೇಲ್ವರ್ಗದ ಸಮುದಾಯದವರು ಮೃತದೇಹವನ್ನು ದಹನ ಮಾಡುತ್ತಿರುವ ಸ್ಥಳದಲ್ಲಿ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಕೆಳ ಸಮುದಾಯದವರು ಆರೋಪಿಸುತ್ತಿದ್ದಾರೆ, ರಸ್ತೆ ಬದಿ ಮೃತದೇಹಗಳನ್ನು ದಹಿಸುತ್ತಿರುವುದರಿಂದ ಸಾರ್ವಜನಿಕರು ಇಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.ಅಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ತಮಗೆ ಶವ ದಹನ ಮಾಡುವ ಸ್ಥಳ ನೀಡಬೇಕೆಂದು ಈ ಸಮುದಾಯದವರು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಪದ್ಮ ಬಸವಂತಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 91 ಗ್ರಾಮಗಳಲ್ಲಿ ಸಮಾಧಿಗಾಗಿ ಸಾರ್ವಜನಿಕ ಸ್ಮಶಾನಗಳಿಲ್ಲ. ಆದ್ದರಿಂದ, ನಾವು ಈ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಮಶಾನಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತೇವೆ ಎಂದರು.

ಸರ್ಕಾರಿ ಜಮೀನುಗಳು ಲಭ್ಯವಿಲ್ಲದ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಲು ಯಾರೂ ಭೂಮಿಯನ್ನು ಹಸ್ತಾಂತರಿಸಲು ಮುಂದೆ ಬಂದಿಲ್ಲ ಮತ್ತು ಈ ಸಮಸ್ಯೆಯನ್ನು ಜಿಲ್ಲಾಡಳಿತದೊಂದಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp