ಮಾ.22 ರಂದು ನಮ್ಮ ಮೆಟ್ರೋ ಬಂದ್: ಉಳಿದ ದಿನಗಳಲ್ಲಿ ಮಕ್ಕಳು, ಹಿರಿಯ ನಾಗರಿಕರಿಗೆ ನಿರ್ಬಂಧ! 

ಮಾ.22 ರಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಬಂದ್ ಆಗಿರಲಿದ್ದು, ಪ್ರಯಾಣಿಕರಿಗೆ ನಿರ್ಬಂಧ ಹೇರುವುದಕ್ಕೆ ಬಿಎಂಆರ್ ಸಿಎಲ್ ಕ್ರಮಗಳನ್ನು ಕೈಗೊಂಡಿದೆ. 
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಮಾ.22 ರಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಬಂದ್ ಆಗಿರಲಿದ್ದು, ಪ್ರಯಾಣಿಕರಿಗೆ ನಿರ್ಬಂಧ ಹೇರುವುದಕ್ಕೆ ಬಿಎಂಆರ್ ಸಿಎಲ್ ಕ್ರಮಗಳನ್ನು ಕೈಗೊಂಡಿದೆ. 

ಮಾ.22 ರಂದು ನಮ್ಮ ಮೆಟ್ರೋ ಸಂಪೂರ್ಣ ಸ್ಥಗಿತವಾಗಿರಲಿದೆ, ಉಳಿದ ದಿನಗಳಲ್ಲಿ ಮಕ್ಕಳು, ಹಿರಿಯ ನಾಗರಿಕರಿಗೆ ಪ್ರಯಾಣ ನಿರ್ಬಂಧ ವಿಧಿಸುವುದಾಗಿ ಬಿಎಂಆರ್ ಸಿಎಲ್ ಹೇಳಿಕೆ ಬಿಡುಗಡೆ ಮಾಡಿದೆ. 

150 ಪ್ರಯಾಣಿಕರ ಮಿತಿಯನ್ನು ಹಾಕಿಕೊಳ್ಳಲಿರುವ ನಮ್ಮ ಮೆಟ್ರೋದಲ್ಲಿ, ಒಳಗೆ ಹೆಚ್ಚುವರಿಯಾಗಿ ನಿಲ್ಲುವುದನ್ನು ಸಹ ನಿರ್ಬಂಧ ವಿಧಿಸಲಾಗಿದೆ. ಪ್ರತಿ ಎರಡನೇ ಸೀಟ್ ಗಳು ಖಾಲಿಯಾಗಿರಬೇಕು ಹಾಗೂ ಥರ್ಮಲ್ ಸ್ಕ್ರೀನಿಂಗ್ ಕೈಗೊಳ್ಳಲಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಆರ್ ಸಿಎಲ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com