ಮಗನ ಅದ್ಧೂರಿ ಮದುವೆ ಮುಂದೂಡಿದ ದೀಪಿಕಾ-ರಣವೀರ್ ವಿವಾಹದ ಕ್ಯಾಟರರ್ ಗಣೇಶ್ ನಾಯಕ್
ಮಗನ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಗಣೇಶ್ ನಾಯಕ್ ಮತ್ತು ಅವರ ಪತ್ನಿ ಸರೋಜಾ ದಂಪತಿಗೆ ನಿರಾಸೆಯಾಗಿದೆ. ಈ ದಂಪತಿಯ ಪುತ್ರ ಶ್ರವಣ್ ಮತ್ತು ಗ್ರೀಷ್ಮಾ ಮದನ್ ವಿವಾಹ ಭಾನುವಾರ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು.
Published: 21st March 2020 11:29 AM | Last Updated: 21st March 2020 11:29 AM | A+A A-

ದೀಪಿಕಾ- ರಣವೀರ್ ಜೊತೆ ಗಣೇಶ್ ನಾಯಕ್
ಬೆಂಗಳೂರು: ಮಗನ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಗಣೇಶ್ ನಾಯಕ್ ಮತ್ತು ಅವರ ಪತ್ನಿ ಸರೋಜಾ ದಂಪತಿಗೆ ನಿರಾಸೆಯಾಗಿದೆ. ಈ ದಂಪತಿಯ ಪುತ್ರ ಶ್ರವಣ್ ಮತ್ತು ಗ್ರೀಷ್ಮಾ ಮದನ್ ವಿವಾಹ ಭಾನುವಾರ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾಡಿದ ಭಾಷಣದಲ್ಲಿ ಜನತಾ ಕರ್ಫ್ಯೂ ವಿಧಿಸಿರುವ ಕಾರಣ ಮದುವೆ ಮುಂದೂಡಲಾಗಿದೆ. ಗಣೇಶ್ ನಾಯಕ್ ಪ್ರಸಿದ್ಧ ಬಾಣಸಿಗ, ಕಳೆದ ವರ್ಷ ಇಟಲಿಯಲ್ಲಿ ನಡೆದ ದೀಪಿಕಾ- ರಣವೀರ್ ಮದುವೆಯಲ್ಲಿ ವಿಶೇಷ ಕರಾವಳಿ ಖಾದ್ಯ ತಯಾರಿಸಿದ್ದರು.
ಮಗನ ಮದುವೆಗಾಗಿ ಕಳೆದ 2 ತಿಂಗಳಿಂದ ಸಿದ್ಧತೆ ಆರಂಭಿಸಿದ್ದರು. ಆದರೆ ಭಾನುವಾರ ಜನತಾ ಕರ್ಫ್ಯೂ ಇರುವ ಕಾರಣ ಮದುವೆ ಮುಂದೂಡಿದ್ದಾರೆ. ಮಗನ ಮದುವೆ ಮುಂದೂಡಿರುವ ವಿಚಾರವನ್ನು ವಾಟ್ಸಾಪ್ ನಲ್ಲಿ ಎಲ್ಲರಿಗೂ ತಿಳಿಸುತ್ತಿದ್ದಾರೆ.