ಕೊರೋನಾ: ಪ್ರವಾಸಿಗರಿಲ್ಲದೆ ಹಂಪಿ ಭಣಭಣ

ಬಹುಶಃ ವಿಜಯನಗರ ಕಾಲದಿಂದಲೂ ಹಂಪಿಯಲ್ಲಿ ಇಂತಹಾ ದೃಶ್ಯ ಕಂಡಿತ್ತೋ ಅಥವಾ ಇಲ್ಲವೊ ಗೊತ್ತಿಲ್ಲ ಆದ್ರೆ ಇಂದು ಅಂತ ರಣ ರಣ ದೃಶ್ಯ ಕಂಡಿದ್ದು ಮಾತ್ರ ಸತ್ಯ.
ಕೊರೋನಾ: ಪ್ರವಾಸಿಗರಿಲ್ಲದೆ ಹಂಪಿ ಭಣಭಣ

ಹೊಸಪೇಟೆ: ಬಹುಶಃ ವಿಜಯನಗರ ಕಾಲದಿಂದಲೂ ಹಂಪಿಯಲ್ಲಿ ಇಂತಹಾ ದೃಶ್ಯ ಕಂಡಿತ್ತೋ ಅಥವಾ ಇಲ್ಲವೊ ಗೊತ್ತಿಲ್ಲ ಆದ್ರೆ ಇಂದು ಅಂತ ರಣ ರಣ ದೃಶ್ಯ ಕಂಡಿದ್ದು ಮಾತ್ರ ಸತ್ಯ.

ಹೌದು ಪ್ರಪಂಚಕ್ಕೆ ಆವರಿಸಿರುವ ಮಹಾ ಮಾರಿ  ಕೊರೋನ ಭೀತಿಯಿಂದ ಎಲ್ಲಾ ಸಾರ್ವಜನಿಕ ಸಂಪರ್ಕ ಸ್ಥಳಗಳನ್ನ ಬಂದ್ ಮಾಡಲಾಗಿದೆ.

ಅದರಲ್ಲಿಯೂ ಯಾವುದೇ ಸಂದರ್ಭದಲ್ಲಿ ಬಾಗಿಲು ಮುಚ್ಚದ ದೇವಸ್ಥಾನಗಳು ಬಾಗಿಲು ಮುಚ್ಚಿವೆ. ಎಂತಾ ಕಷ್ಟ ಬಂದರೂ ದೇವಸ್ಥಾನಕ್ಕೆ ಬರುವುದನ್ನ ನಿಲ್ಲಿಸಿದ ಭಕ್ತರು ಇದೀಗ ದೇಗುಲಗಳ ಕಡೆ ಮುಖ ಮಾಡುವುದನ್ನ ಕೂಡ ನಿಲ್ಲಿಸಿದ್ದಾರೆ.

ಪ್ರತಿದಿನ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪವಿತ್ರ ಸ್ಥಳಗಳು ಜನರ ಸುಳಿವಿಲ್ಲದೆ ಇದ್ರೆ ಹೇಗೆ ಬಣಗುಡುತ್ತವೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ.ಇಂತದ್ದೊಂದು ರಣ ರಣ ಬಿಸಿಲಿನಲ್ಲಿ ಜನ ಜಂಗುಳಿ ಇಲ್ಲದೆ, ಬಣ ಗುಡುತ್ತಿರುವ ಈ ಸ್ಥಳ ನಮ್ಮ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಬಾಗದ ರಥ ಬೀದಿ. 

ಹೌದು ಒಂದು ಕಡೆ ಜನಗಳಲ್ಲಿದೆ ಬಣಗುಡುತ್ತಿರುವ ರಥ ಬೀದಿ, ಮತ್ತೊಂದು ಕಡೆ ಇತಿಹಾಸದಲ್ಲಿ ಎಂದೂ ಬಾಗಿಲು ಮುಚ್ಚದ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಮುಖ ಬಾಗಿಲು ಮುಚ್ಚಿರುವ ದೃಶ್ಯ.

ಇದಕ್ಕೆಲ್ಲ ಕಾರಣ ದೇಶಕ್ಕೆ ಬಂದೊದಗಿರುವ ಕೊರೋನ ಕಂಟಕ, ಹೌದು ಕಳೆದ ಒಂದು ವಾರದಿಂದ ಹಂಪಿಗೆ ಬರುವ ದೇಶ ವಿದೇಶ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ.

ಆದ್ರೆ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಮುಖ ದ್ವಾರಬಾಗಿಲನ್ನ ಮುಚ್ಚಿರಲಿಲ್ಲ, ಆದ್ರೆ ಇಂದು ಬಿಷ್ಟಪ್ಪಯ್ಯ ಗೋಪುರದ ಪ್ರಮುಖ ದ್ವಾರಬಾಗಿಲನ್ನ ಮುಚ್ಚಿ ವಿರೂಪಾಕ್ಷೇಶ್ವರ ದೇವಸ್ಥಾನದ ಸಂಕೀರ್ಣದ ಪ್ರವೇಶವನ್ನ ಸಂಪೂರ್ಣ ಕಡಿತಗೊಳಿಸಲಾಗಿದೆ. 

ಅಂದಹಾಗೆ ಕಳೆದ ಒಂದು ವಾರದಿಂದ ದೇವಸ್ಥಾನದ ಗರ್ಭಗುಡಿಯನ್ನ ಮಾತ್ರ ಬಂದ್ ಮಾಡಲಾಗಿತ್ತು, ಹಾಗಾಗಿ ಕೆಲವು ಭಕ್ತರು ದೇವಸ್ಥಾನಕ್ಕೆ ಭೇಟಿಕೊಟ್ಟು ಹೊರಗಡೆಯಿಂದಲೇ ದೇವರಿಗೆ ನಮಸ್ಕರಿಸಿ ಹೋಗುತಿದ್ರು. ಆದ್ರೆ ಇಂದಿನಿಂದ ದೇವಸ್ಥಾನದ ಪ್ರಮುಖ ದ್ವಾರಬಾಗಿಲ್ಲನ್ನ ಮುಚ್ಚಿ ಸಂಪೂರ್ಣವಾಗಿ ಪ್ರವೇಶಕ್ಕೆ ನಿರ್ಭಂದ ಹೇರಲಾಗಿದೆ.

ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ವಿರೂಪಾಕ್ಷೇಶ್ವರ ದೇವರು ಮಾತ್ರವಲ್ಲ, ಪಂಪಾ ದೇವಿ, ನಾಡ ದೇವತೆ ಭುವನೇಶ್ವರಿ ದೇವಿ ಸೇರಿದಂತೆ ಇನ್ನೂ ಹಲವು ದೇವಸ್ಥಾನಗಳಿವೆ.  ಇನ್ನು ಈ ದೃಶ್ಯವನ್ನೆಲ್ಲ ನೋಡುತಿದ್ರೆ ಎಂತವರಿಗೂ ಕಷ್ಟ ತಪ್ಪಿದ್ದಲ್ಲ ಎನ್ನುವ ಮಾತು ನೆನಪಾಗುತ್ತೆ. ಇದುವರೆಗೆ ಮನುಷ್ಯರಿಗೆ ಕಷ್ಟ ಬಂದಿದ್ದನ್ನ ನೋಡಿದ್ವಿ ಕೇಳಿದ್ವು,ಆದ್ರೆ ಈಗ ದೇವರಿಗೇ ದಿಗ್ಬಂದನ ಹಾಕುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಅದಕ್ಕೆ ಕಾರಣ ಕೊರೋನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com