ಹೊಟೇಲ್‌ಗಳಲ್ಲಿ ಕ್ವಾರೆಂಟೇನ್ ಮಾಡಲು  ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಸಲಹೆ

ಹೊರದೇಶಗಳಿಂದ ರಾಜ್ಯಕ್ಕೆ ಬರುವವರಿಂದ ಸುರಕ್ಷಿತವಾಗಲು ಸರ್ಕಾರ ಕ್ವಾರೆಂಟೇನ್ ಮಾಡುವಂತೆ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸಲಹೆ ನೀಡಿದ್ದಾರೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ಹೊರದೇಶಗಳಿಂದ ರಾಜ್ಯಕ್ಕೆ ಬರುವವರಿಂದ ಸುರಕ್ಷಿತವಾಗಲು ಸರ್ಕಾರ ಕ್ವಾರೆಂಟೇನ್ ಮಾಡುವಂತೆ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸಲಹೆ ನೀಡಿದ್ದಾರೆ.

ರಾಜ್ಯಕ್ಕೆ ಕಳೆದ 2 ದಿನಗಳಿಂದ ಇಂದು ಮಧ್ಯರಾತ್ರಿ ವರೆಗೆ ಇಟಲಿ ಸೇರಿ ಹೊರದೇಶಗಳಿಂದ 22,000 ಜನ ಬೆಂಗಳೂರಿಗೆ ಬರುತ್ತಿದ್ದಾರೆ. 

ಇವರಿಂದ ಸುರಕ್ಷಿತವಿರಲು ಸರ್ಕಾರ ತುರ್ತಾಗಿ ನಗರದ ಅಗತ್ಯವಿರುವ ಹೊಟೇಲ್‌ಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ ಎಂದು ಎಚ್.ಕೆ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಜನರು ಆಗಮಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬ ವಿದೇಶಿ ಪ್ರಯಾಣಿಕನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ, ಆಂತರಿಕ ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com