ಕೋವಿದ್-19: ವ್ಯವಹಾರ ನಷ್ಟಕ್ಕೆ ಹೆದರಿ ಬೆಂಗಳೂರಿನಲ್ಲಿ ಆಟೋಚಾಲಕ ಆತ್ಮಹತ್ಯೆ

ಕೊರೋನಾ ವೈರಸ್ ಪರಿಣಾಮ ಹೆಚ್ಚಾಗಿ ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯ ಹೊಂದಿರುವ ಜನರೆ ಮೇಲೆ ಹೆಚ್ಚಾಗುತ್ತಿದೆ.  ಕಳೆದ 3 ವಾರಗಳಿಂದ ಸರಿಯಾದ ವ್ಯಾಪಾರ ಇಲ್ಲದ ಕಾರಣ ಮಾರ್ಚ 19 ರದು  ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ  ಶರಣಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಪರಿಣಾಮ ಹೆಚ್ಚಾಗಿ ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯ ಹೊಂದಿರುವ ಜನರೆ ಮೇಲೆ ಹೆಚ್ಚಾಗುತ್ತಿದೆ.  ಕಳೆದ 3 ವಾರಗಳಿಂದ ಸರಿಯಾದ ವ್ಯಾಪಾರ ಇಲ್ಲದ ಕಾರಣ ಮಾರ್ಚ 19 ರದು  ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ  ಶರಣಾಗಿದ್ದಾರೆ.

ಆರ್ ಟಿ ನಗರ ನಿವಾಸಿ 24 ವರ್ಷದ ಶಿವಕುಮಾರ್  ಮಾರ್ಚ 19ರ ರಾತ್ರಿ 8.30 ರಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 2 ವಾರಗಳಿಂದ ಆತನ ಆಟೋದಲ್ಲಿ ಪ್ರಯಾಣಿಸಲು ಯಾವುದೇ ಪ್ರಯಾಣಿಕರು ಇರಲಿಲ್ಲ,  ದುಡಿದು ತಂದು ಹಣ ಕೊಡಲಿಲ್ಲ ಎಂದು ಕುಟುಂಬಸ್ಥರು ನಿಂದಿಸಿದ್ದರು. 

ಶಿವಕುಮಾರ್ ಹಿರಿಯ ಸಹೋದರಿ ಅಕ್ಕಪಕ್ಕದ ಮನೆಗಳಲ್ಲಿ ಕೆಲಸ ಮಾಡಿ ಸಂಸಾರ ನಿರ್ವಹಿಸುತ್ತಿದ್ದರು. ಆದರೆ ಶಿವಕುಮಾರ್ ಹೊರಗೆ ಹೋಗದೇ ಮನೆಯಲ್ಲಿದ್ದು ದುಡಿಯದೇ ಕುಳಿತಿದ್ದಾನೆಂದು ಅವನ ಅಕ್ಕ ಬೈಯ್ದಿದ್ದರು. ಹೀಗಾಗಿ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ಸ್ನೇಹಿತರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com