ಕೆಲ ದಿನಗಳ ಮಟ್ಟಿಗೆ ಸಾರ್ವಜನಿಕರ ಭೇಟಿ ಇಲ್ಲ : ಡಿ.ಕೆ ಶಿವಕುಮಾರ್

ಕೊರೋನಾ ವೈರಸ್​ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದರೆ, ಕೆಲವರ ನಿರ್ಲಕ್ಷ್ಯದಿಂದ ಅನೇಕರು ಈ ವೈರಸ್​ಗೆ ತುತ್ತಾಗುತ್ತಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಕೊರೋನಾ ವೈರಸ್​ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದರೆ, ಕೆಲವರ ನಿರ್ಲಕ್ಷ್ಯದಿಂದ ಅನೇಕರು ಈ ವೈರಸ್​ಗೆ ತುತ್ತಾಗುತ್ತಿದ್ದಾರೆ.

ಇತ್ತೀಚೆಗೆಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವರನ್ನು ಭೇಟಿ ಮಾಡಲು ನಿತ್ಯ ನೂರಾರು ಕಾರ್ಯಕರ್ತರು ಅವರ ಮನೆ ಎದುರು ಸೇರುತ್ತಿದ್ದರು. ಅವರೆಲ್ಲರನ್ನೂ ಡಿಕೆಶಿ ಭೇಟಿ ಮಾಡುತ್ತಿದ್ದರು.

ಆದರೆ ಇನ್ನು ಕೆಲ ದಿನಗಳ ಕಾಲ ಸಾರ್ವಜನಿಕರನ್ನು ತಮ್ಮ ಸದಾಶಿವನಗರ ಮನೆಯಲ್ಲಿ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಅಭಿನಂದನೆ ಸಲ್ಲಿಸಲು ಒಂದು ವಾರದವರೆಗೆ ಬರಬೇಡಿ.‌ ನೀವು ಇರುವಲ್ಲಿಯೇ ಇದ್ದರೆ ಉತ್ತಮ. ಹೀಗೆ ಮಾಡುವುದರಿಂದ ಸೋಂಕು ತಡೆಯಲು ನೆರವಾಗಬಹುದು' ಎಂದು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com