ಶಿವಮೊಗ್ಗ: ಕರೋನವೈರಸ್ ಬಗ್ಗೆ ವಾಟ್ಸಾಪ್‍ನಲ್ಲಿ ನಕಲಿ ಸುದ್ದಿ ಹರಡಿದ್ದ ವ್ಯಕ್ತಿಯ ಬಂಧನ

ಕೊವಿದ್ -19 ಸೋಂಕಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡಿದ್ದ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ:  ಕೊವಿದ್ -19 ಸೋಂಕಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡಿದ್ದ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಕೊವಿದ್‍-19 ಸೋಂಕಿತ ಇಬ್ಬರು ವ್ಯಕ್ತಿಗಳು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ ಎಂದು ಇಲ್ಲಿಗೆ ಸಮೀಪದ ನಾರಾಯಣಪುರ ಗ್ರಾಮದ ನಿವಾಸಿ ನಾಗರಾಜ ನಾಯಕ್ ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಿದ್ದ.

ಸೋಂಕಿತ ಇಬ್ಬರು ವ್ಯಕ್ತಿಗಳನ್ನು ಪತ್ತೆ ಮಾಡುವವರೆಗೆ ಜನರು ತಮ್ಮ ಮನೆಗಳಿಂದ ಹೊರಬರಬಾರದು ಎಂದು ಸಂದೇಶದಲ್ಲಿ ಮನವಿ ಮಾಡಲಾಗಿತ್ತು. ಆದರೆ ಸಂದೇಶದಲ್ಲಿನ ಮಾಹಿತಿ ಸುಳ್ಳಾಗಿತ್ತು. ಜನರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ಸುದ್ದಿ ಹಬ್ಬಿಸಲಾಗಿತ್ತು. ಭಾರತೀಯ ದಂಡ ಸಂಹಿತೆ ಸೆಕ್ಷನ್ 505 (1) (ಬಿ ) ಅಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com