ಬೆಂಗಳೂರು: ವರನಟ ಡಾ. ರಾಜ್ ಕುಟುಂಬದ ಆಪ್ತ, ಉದ್ಯಮಿ ಕಪಾಲಿ ಮೋಹನ್‌ ಆತ್ಮಹತ್ಯೆ!

 ಡಾ. ರಾಜ್ ಕುಮಾರ್ ಕುಟುಂಬಕ್ಕೆ ಹತ್ತಿರದವರಾಗಿದ್ದ ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

Published: 23rd March 2020 12:56 PM  |   Last Updated: 23rd March 2020 12:56 PM   |  A+A-


ಕಪಾಲಿ ಮೋಹನ್

Posted By : Raghavendra Adiga
Source : Online Desk

ವರನಟ ಡಾ. ರಾಜ್ ಕುಮಾರ್ ಕುಟುಂಬಕ್ಕೆ ಹತ್ತಿರದವರಾಗಿದ್ದ ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಸಮೀಪ ಸುಪ್ರೀಂ ಹೋಟೆಲ್ ನಲ್ಲಿ ಉದ್ಯಮಿ ಮೋಹನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಸುಪ್ರೀಂ ಹೋಟೆಲ್ ಕಪಾಲಿ ಮೋಹನ್ ಅವರ ಒಡೆತನದ ಹೋಟೆಲ್ ಆಗಿದೆ. 

ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲ. ಸಧ್ಯ ಸ್ಥಳಕ್ಕೆ  ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp