ಕೊರೋನಾ ವೈರಸ್: ನಾಳೆಯಿಂದ ದೆಹಲಿಯ ಏಮ್ಸ್ ಒಪಿಡಿ ಬಂದ್

ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮಂಗಳವಾರದಿಂದ ಮುಂದಿನ ಆದೇಶದವರೆಗೆ ವಿಶೇಷ ಸೇವೆ ಸೇರಿದಂತೆ ಎಲ್ಲ ವಿಭಾಗಗಳ ಒಪಿಡಿಯನ್ನು ಬಂದ್ ಮಾಡಿದೆ.
ಏಮ್ಸ್
ಏಮ್ಸ್

ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮಂಗಳವಾರದಿಂದ ಮುಂದಿನ ಆದೇಶದವರೆಗೆ ವಿಶೇಷ ಸೇವೆ ಸೇರಿದಂತೆ ಎಲ್ಲ ವಿಭಾಗಗಳ ಒಪಿಡಿಯನ್ನು ಬಂದ್ ಮಾಡಿದೆ.

ಮಾರ್ಚ್ 24ರಿಂದ ಹೊರ ರೋಗಿಗಳ ವಿಭಾಗವನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ ಎಂದು ಏಮ್ಸ್ ಇಂದು ಆದೇಶ ಹೊರಡಿಸಿದೆ.

ಕೊವಿಡ್ -19 ನಿಯಂತ್ರಿಸಲು ಮತ್ತು ತನ್ನ ಸಂಪನ್ಮೂಲಗಳನ್ನು ಕೊರೋನಾ ಪೀಡಿತರಿಗೆ ಬಳಸಿಕೊಳ್ಳುವುದಕ್ಕಾಗಿ ಮಾರ್ಚ್ 23 ರಿಂದ ಎಲ್ಲಾ ವಿಭಾಗಗಳ ಒಪಿಡಿ ಮತ್ತು ರೋಗಿಗಳ ಹೊಸ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಏಮ್ಸ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com