ಧಾರವಾಡದಲ್ಲಿ ಮೊದಲ ಕೋವಿಡ್ -19 ಪಾಸಿಟಿವ್ ಪ್ರಕರಣ: 3 ಕಿ.ಮೀ ವ್ಯಾಪ್ತಿಯಲ್ಲಿ ಲಾಕ್ ಡೌನ್ 

 ಧಾರವಾಡದಲ್ಲಿ ಮೊದಲ ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ ಧಾರವಾಡದ 33 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಹುಬ್ಬಳ್ಳಿಯ ಚೆಕ್ ಪೋಸ್ಟ್
ಹುಬ್ಬಳ್ಳಿಯ ಚೆಕ್ ಪೋಸ್ಟ್

ಹುಬ್ಬಳ್ಳಿ/ಗದಗ:  ಧಾರವಾಡದಲ್ಲಿ ಮೊದಲ ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ ಧಾರವಾಡದ 33 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ದುಬೈ ಮತ್ತು ಮಸ್ಕತ್ ಮಾರ್ಗವಾಗಿ ಆಸ್ಟ್ರೇಲಿಯಾದಿಂದ ಸ್ವಗ್ರಾಮ ಧಾರಾವಾಡಕ್ಕೆ ಈತ ಬಂದಿದ್ದಾನೆ. ಮಾರ್ಚ್ 12 ರಂದು ಸಂಜೆ ಪಣಜಿ ವಿಮಾನ ನಿಲ್ದಾಣದಲ್ಲಿ ಈತ ಲ್ಯಾಂಡ್ ಆಗಿದ್ದು, ಕೆಎ26ಎಫ್ 962 ಕೆಎಸ್ ಆರ್ ಟಿಸಿ  ಬಸ್ ನಲ್ಲಿ ಮಾರ್ಚ್ 13ರಂದು ಧಾರವಾಡ ತಲುಪಿದ್ದಾನೆ.

ಮಾರ್ಚ್ 17 ರಂದು ಕೆಮ್ಮು, ಶೀತ ಕಾಣಿಸಿಕೊಂಡರಿಂದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗಿದ್ದಾನೆ. ನಂತರ ವೈದ್ಯರು ಕೊರೋನಾ ಶಂಕೆ ವ್ಯಕ್ತಪಡಿಸಿದ್ದು, ಎಸ್ ಡಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿ ಶನಿವಾರದವರೆಗೂ ಕ್ವಾರಂಟೀನ್ ನಲ್ಲಿ ಇಡಲಾಗಿತ್ತು. ಗಂಟಲು ದ್ರವ ಮಾದರಿಯನ್ನು ಶಿವಮೊಗ್ಗದಲ್ಲಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಪಾಸಿಟಿವ್  ವರದಿ ಬಂದಿದೆ. 

ಬಳಿಕ ಅಲರ್ಟ್ ಆದ ಜಿಲ್ಲಾಡಳಿತ ರೋಗಿಯನ್ನು ಭಾನುವಾರ ಕಿಮ್ಸ್ ಆಸ್ಪತ್ರೆಗೆ ರವಾನಿಸಿದೆ. ಜಿಲ್ಲಾಡಳಿತ ಆಲರ್ಟ್ ಆಗುತ್ತಿದ್ದಂತೆ ಆತ ತಂಗಿದ್ದ ಹೊಸಯಲ್ಲಾಪುರ ಗ್ರಾಮದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು. 

ನುಗ್ಗಿಕೇರಿ, ಕೆಲಗಿರಿ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲ ಬಳಿ ಜಿಲ್ಲಾಡಳಿತ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದು, ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಜನರ ತಪಾಸಣೆ ಮಾಡುತ್ತಿದೆ. ಕೋವಿಡ್ -19 ಪಾಸಿಟಿವ್ ಕಂಡುಬಂದ ವ್ಯಕ್ತಿಯ ಜೊತೆಯಲ್ಲಿ ಬಸ್ ನಲ್ಲಿ ಬಂದವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಅಂತಹ ಪ್ರಯಾಣಿಕರು ಗದಗ್ ನ ಜಿಮ್ಸ್ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಗಾಗುವಂತೆ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com