ಕರ್ನಾಟಕದಲ್ಲಿ ಕೊರೋನಾ ರೌದ್ರಾವತಾರ: ಇಂದು ಒಂದೇ ದಿನ 7 ಮಂದಿಗೆ ಸೋಂಕು, ರಾಜ್ಯದಲ್ಲಿ 33 ಪ್ರಕರಣ!

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ತನ್ನ ಕದಂಬಬಾಹುವನ್ನು ಚಾಚುತ್ತಿದ್ದು ಇಂದು ಒಂದೇ ದಿನ 7 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. 

Published: 23rd March 2020 09:26 PM  |   Last Updated: 23rd March 2020 09:26 PM   |  A+A-


BSY

ಬಿಎಸ್ ಯಡಿಯೂರಪ್ಪ ಸಭೆ

Posted By : Vishwanath S
Source : Online Desk

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ತನ್ನ ಕದಂಬಬಾಹುವನ್ನು ಚಾಚುತ್ತಿದ್ದು ಇಂದು ಒಂದೇ ದಿನ 7 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. 

ದುಬೈನಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಕೇರಳ ಮೂಲದ 46 ವರ್ಷದ ವ್ಯಕ್ತಿ ಹಾಗೂ 38 ವರ್ಷದ ವ್ಯಕ್ತಿಯಲ್ಲೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಅವರನ್ನು ಬೆಂಗಳೂರಿನಲ್ಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

100%

ಇನ್ನು ಬೆಂಗಳೂರು ಒಂದರಲ್ಲೇ 23 ಪ್ರಕರಣಗಳು ಪತ್ತೆಯಾಗಿದೆ. ಕಲಬುರಗಿ 3, ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ 2, ಕೊಡಗು, ಧಾರವಾಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ 33 ಪ್ರಕರಣಗಳು ದೃಢಪಟ್ಟಿವೆ.

100%

ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp