ಜನತಾ ಕರ್ಫ್ಯೂ ವೇಳೆ ಹಾಲಿನ ಅಂಗಡಿ ಮಾಲೀಕನ ಮೇಲೆ ಪೊಲೀಸ್ ದರ್ಪ: ವಿಡಿಯೋ ವೈರಲ್

ಜನತಾ ಕರ್ಫ್ಯೂ ವೇಳೆ ಹಾಲಿನ ಅಂಗಡಿ ಮಾಲೀಕನ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ದರ್ಪ ತೋರಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದ್ದು, ಪೊಲೀಸನ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗತೊಡಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಜನತಾ ಕರ್ಫ್ಯೂ ವೇಳೆ ಹಾಲಿನ ಅಂಗಡಿ ಮಾಲೀಕನ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ದರ್ಪ ತೋರಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದ್ದು, ಪೊಲೀಸನ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗತೊಡಗಿದೆ. 

ಪೊಲೀಸರ ವರ್ತನೆ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಹಾಲು ಅಗತ್ಯ ವಸ್ತುಗಳ ಪಟ್ಟಿಗೆ ಬರಲಿದ್ದು, ಮಾರಾಟಕ್ಕೆ ಸರ್ಕಾರವೇ ಅನುಮತಿ ನೀಡಿದ್ದರೂ ಅಧಿಕಾರಿ ಹಾಲು ಮಾರಾಟಗಾರನ ಮೇಲೆ ದೌರ್ಜನ್ಯವೆಸಗಿರುವುದು ವಿರೋಧಕ್ಕೆ ಕಾರಣವಾಗಿದೆ. 

ಸರಸ್ವತಿಪುರಂನಲ್ಲಿ ಹಾಲಿನ ಅಂಗಡಿಯಿದ್ದು, ಅಂಗಡಿ ಬಳಿ ಬಂದ ಕೆಲ ಪೊಲೀಸರು, ಅಂಗಡಿ ಬಂದ್ ಮಾಡುವಂತೆ ಸೂಚಿಸಿದರು. ಹಾಲು ಅಗತ್ಯ ವಸ್ತುಗಳ ಪಟ್ಟಿಗೆ ಬರುತ್ತದೆ ಎಂದು ನಾನು ಹೇಳಿದ್ದೆ. ಆದರೂ ಪೊಲೀಸರು ಅಂಗಡಿ ಬಂದ್ ಮಾಡುವಂತೆ ದರ್ಪ ತೋರಿದರು ಎಂದು ಹಾಲಿನ ಅಂಗಡಿ ಮಾಲೀಕ ಕುಮಾರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com