ಮುಂದುವರೆದ ಲ್ಯಾಪ್ ಟಾಪ್ ಗಲಾಟೆ: ಅರ್ಧ ದಿನ ಸದನ ಮುಂದೂಡಿಕೆ

ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಗಾಗಿ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ಧರಣಿ ಮುಂದುವರೆದ ಪರಿಣಾಮ ಕೊನೆಯ ಮೇಲ್ಮನೆಯ ಬೆಳಗಿನ ಕಲಾಪವನ್ನು ನುಂಗಿಹಾಕಿದ್ದು ಸದನವನ್ನು ಸಭಾಪತಿಗಳು ಎರಡು ಬಾರಿ ಮುಂದೂಡಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಗಾಗಿ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ಧರಣಿ ಮುಂದುವರೆದ ಪರಿಣಾಮ ಕೊನೆಯ ಮೇಲ್ಮನೆಯ ಬೆಳಗಿನ ಕಲಾಪವನ್ನು ನುಂಗಿಹಾಕಿದ್ದು ಸದನವನ್ನು ಸಭಾಪತಿಗಳು ಎರಡು ಬಾರಿ ಮುಂದೂಡಿದರು.

ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ರಾಜ್ಯದಲ್ಲಿ ಕೊರೊನಾ ವೈರಸು ಸೋಂಕು ಹೆಚ್ಚುತ್ತಿರುವ ಕಾರಣ ಕೆಳಮನೆಯಲ್ಲಿನ ತೀರ್ಮಾನದಂತೆ ಅಧಿವೇಶನವನ್ನು ಇಂದಿಗೆ ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಮನವಿ ಮಾಡಿದರು.

ಈ ವೇಳೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಲ್ಯಾಪ್ ಟಾಪ್ ಖರೀದಿಯಲ್ಲಿನ ಅವ್ಯವಹಾರ ಬಗ್ಗೆ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಧಿಕ್ಕಾರ ಕೂಗಿದವು. ನಿನ್ನೆಯ ಪ್ರತಿಭಟನೆಯನ್ನು ಇಂದೂ ಸಹ ಮುಂದುವರೆಸಿದವು. ಸದನದಲ್ಲಿ ಗಲಾಟೆ ತಾರಕಕ್ಕೇರಿದಾಗ ಸಭಾಪತಿಗಳು ಕಲಾಪವನ್ನು ಅರ್ಧಗಂಟೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com