ಕೊರೋನಾ ವೈರಸ್: ಹೋಂ ಕ್ವಾರಂಟೈನ್ ಒಳಗಾದವರ ಚಲನವಲನ ಪತ್ತೆಗೆ ಬರಲಿದೆ ಜಿಯೋಫೆನ್ಸಿಂಗ್

ಕೊರೋನಾ ವೈರಸ್ ಇಡೀ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು, ಲಾಕ್'ಡೌನ್ ನಡುವಲ್ಲೂ ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು  ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಇಡೀ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು, ಲಾಕ್'ಡೌನ್ ನಡುವಲ್ಲೂ ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು  ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದೆ. 

ಒಂದೆಡೆ ಸ್ಥಳೀಯ ಜನರನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಸ್ಟ್ಯಾಂಪ್ ಹಾಕಿ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸುತ್ತಿದ್ದರೂ, ಸಾಕಷ್ಟು ಮಂದಿ ರಸ್ತೆಗಳಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವುದು ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರು ಮಾಡಿದೆ. ರಸ್ತೆಗಳಲ್ಲಿ ಹೋಂ ಕ್ವಾರಂಟೈನ್ ಗಳು ಓಡಾಡುತ್ತಿರುವುದರಿಂದ ಜನರಲ್ಲಿ ಸಾಕಷ್ಟು ಭೀತಿ ಶುರುವಾಗಿದೆ. ಹೀಗಾಗಿ ಇವರ ಚಲನವನಲಗಳ ಮೇಲೆ ಕಣ್ಗಾವಲಿರಿಸಲು ಸರ್ಕಾರ ಜಿಯೋ ಫೆನ್ಸಿಂಗ್ ಪರಿಚಯಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ಈಗಾಗಲೇ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಬಿಬಿಎಂದು ಮಾತುಕತೆ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪ್ರಸ್ತುತ ನಗರದಲ್ಲಿ ಸುಮಾರು 5,000 ಮಂದಿಯ ಕೈಗಳಿಗೆ ಹೋಂ ಕ್ವಾರಂಟೈನ್ ಮುದ್ರೆಗಲನ್ನು ಹಾಕಲಾಗಿದ್ದು, ಇವರಲ್ಲಿ ಹಲವರು ತಮಗೇನು ಆಗಿಲ್ಲವೆಂಬಂತೆ ರಸ್ತೆಗಳಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. 

ಈಗಾಗಲಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳುವ ಸಂದರ್ಭ ಬಂದಿದೆ. ಸಿಲಿಕಾನ್ ಸಿಟಿಯನ್ನು ಐಟಿ ಸಿಟಿ ಎಂದೂ ಕೂಡ ಕರೆಯಲಾಗುತ್ತಿದ್ದು, ಇದರಂತೆ ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಟೆಕ್ನಾಲಜಿಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಜಿಯೋಫೆನ್ಸಿಂಗ್ ಬಗ್ಗೆ ಈಗಾಗಲೇ ಇಲಾಖೆಗಳು ಗೂಗಲ್ ಹಾಗೂ ಇತರೆ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಹೋಂಕ್ವಾರಂಟೈನ್ ಗಳ ಚಲನವಲಗಳ ಮೇಲೆ ನಿಗಾಇಡಲು ಟೆಕ್ನಾಲಜಿಯನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದರ ಕುರಿತು ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೀಗಾಗಿ ಪ್ರತೀ ಹೋಂ ಕ್ವಾರಂಟೈನ್ ಗಳ ಮೇಲೆ ಕಣ್ಗಾವಲಿಡಲು ಪೊಲೀಸರ ನಿಯೋಜನೆಗೆ ಕಷ್ಟಕರವಾಗಿದೆ. ಸ್ಟ್ಯಾಂಪ್ ಹಾಕಿದ ಪ್ರತೀಯೊಬ್ಬರ ಮೇಲೆ ಕಣ್ಗಾವಲಿರಿಸಲು ಸಾಧ್ಯವಿಲ್ಲ. ಹೀಗಾಗಿ ಜಿಯೋಫೆನ್ಸಿಂಗ್ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದಾರೆ. ಮೊಬೈನ್ ಫೋನ್, ಸ್ಟ್ಯಾಂಪ್ ಅಥವಾ ಬಾರ್ ಕೋಡ್ ಮೂಲಕ ಅವರ ಚಲನವಲನಗಳ ಮೇಲೆ ನಿಗಾ ಇರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com