ಕೊರೋನಾ ಭೀತಿಯಿಂದ ಊರಿಗೆ ತೆರಳುತ್ತಿದ್ದವರಿಗೆ ಅಪಘಾತ: ಬಾಗಲಕೋಟೆಯಲ್ಲಿ ಮೂವರ ಸಾವು

ಬೆಳ್ಳಂಬೆಳಗ್ಗೆ ಕಾರು ಅಪಘಾತ ಸಂಭವಿಸಿ ಮೂವರರು ಸಾವನ್ನಪ್ಪಿದ್ದು, ಮೂವರು ವ್ಯಕ್ತಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ. 

Published: 24th March 2020 01:28 PM  |   Last Updated: 24th March 2020 04:03 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : Online Desk

ಬಾಗಲಕೋಟೆ:  ಮಹಾಮಾರಿ ಕೋವಿಡ್-19 ಸೋಂಕಿನ ನಿರ್ಬಂಧದ ನಡುವೆಯೂ ತಮ್ಮ ಊರಿಗೆ ಹೊರಟಿದ್ದ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಕೊಡಗಲಿ ಬಳಿ ಮಂಗಳವಾರ ಸಂಭವಿಸಿದೆ‌.

ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಕಟಕಚಿಂಚೂಳಿ ಗ್ರಾಮದ ಸುವರ್ಣ (40), ಬಸವಣ್ಣೆಪ್ಪ (70) ಸವಿತಾ (20) ಮೃತ ದುರ್ದೈವಿಗಳು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಗರ ಪ್ರದೇಶದಿಂದ ತಮ್ಮ ಊರಿಗೆ ತೆರಳುತ್ತಿದ್ದ ಇವರು ದಯನೀಯವಾಗಿ ಅಸುನೀಗಿದ್ದಾರೆ. 

ಮೃತರೆಲ್ಲರೂ ಬೆಂಗಳೂರನಿಂದ ಇಳಕಲ್ ಮಾರ್ಗವಾಗಿ ಬೀದರಗೆ ತೆರಳುತ್ತಿದ್ದಾಗ, ಹಿರೇಕೊಡಗಲಿ ಬಳಿ ರಸ್ತೆ ತಿರುವು ಗೊತ್ತಾಗದೆ ಕಲ್ಲು ಬಂಡೆಗೆ ಕಾರು ಡಿಕ್ಕಿ ಹೊಡಿದಿದೆ. ಪರಿಣಾಮ ಆರು ಜನರು ಗಂಭೀರ ಗಾಯಗೊಂಡಿದ್ದು ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಇಳಕಲ್ ನಿಂದ ಬಾಗಲಕೋಟೆ ಆಸ್ಪತ್ರೆಗೆ ಹೋಗುವ ವೇಳೆ ಇನ್ನೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಮೂರು ಜನ ಗಂಭೀರ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp