ಕರ್ನಾಟಕ ಲಾಕ್ ಡೌನ್: ಜಿಲ್ಲೆಗಳು ಸ್ತಬ್ಧ 

ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದರಿಂದ ಇಂದು ಉಡುಪಿ ಜಿಲ್ಲೆ ಸ್ತಬ್ಧವಾಗಿದೆ. 
ಕರ್ನಾಟಕ ಲಾಕ್ ಡೌನ್: ಜಿಲ್ಲೆಗಳು ಸ್ತಬ್ಧ 

ಬೆಂಗಳೂರು: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದರಿಂದ ಇಂದು ಉಡುಪಿ ಜಿಲ್ಲೆ ಸ್ತಬ್ಧವಾಗಿದೆ. 


ಬೆಂಗಳೂರು ಮತ್ತು ಹೊರ ಜಿಲ್ಲೆಗಳಿಂದ ಬಸ್ಸುಗಳು ಉಡುಪಿ ನಗರಕ್ಕೆ ಆಗಮಿಸಿದ್ದು ಪ್ರಯಾಣಿಕರು ತಮ್ಮ ಮನೆಗೆ ತೆರಳಲು ಅಟೋ ಬಳಕೆ ಮಾಡುತ್ತಿರುವ ದೃಶ್ಯ ಕಂಡುಬಂತು. ಈ ನಡುವೆ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ನಗರದ ಸಂತೆ ಮಾರುಕಟ್ಟೆಯಲ್ಲಿ ತರಕಾರ ವ್ಯಾಪಾರ ಅಭಾದಿತವಾಗಿದ್ದು ವ್ಯಾಪಾರಿಗಳು ತರಕಾರಿ ಖರೀದಿಗೆ ಮುಗಿ ಬೀಳುವ ದೃಶ್ಯ ಕಂಡುಬಂತು.
ನಗರದಲ್ಲಿ ಖಾಸಗಿ ಬಸ್ ಸೇರಿದಂತೆ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ನಗರದ ಸರ್ವಿಸ್ ಮತ್ತು ಸಿಟಿ ಬಸ್ಸು ನಿಲ್ದಾಣ ಸಂಪೂರ್ಣ ಖಾಲಿಯಾಗಿದೆ. 


ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕೋಲಾರ ಜಿಲ್ಲೆಯೂ ಕೂಡ ಲಾಕ್ ಡೌನ್ ಆಗಿದೆ. ಯಾವುದೇ ಸರ್ಕಾರಿ ಅಥವಾ ಖಾಸಗಿ ಬಸ್ ಗಳು ಇಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇರಲಿಲ್ಲ. ಬಸ್ ನಿಲ್ದಾಣವನ್ನು ನಿರ್ಬಂಧಿಸಲಾಗಿದೆ. ಈ ನಡುವೆ ಅಗತ್ಯ ಸೇವೆಗಳಿಗೆ ವಿನಾಯತಿ ನೀಡಿಲಾಗಿದೆ.


ಈ ಹಿಂದೆ ಸಾಕಷ್ಟು ಜನಜಂಗುಳಿಯಿಂದ ಕೂಡಿರುತ್ತಿತ್ತು ಆದರೆ ಲಾಕ್ ಡೌನ್ ಹಿನ್ನಲೆಯಲ್ಲಿ ನಗರ ಸ್ಥಬ್ದವಾಗಿದೆ ಎನ್ನುತ್ತಾರೆ ಪೋಲಿಸ್‌ ಪೇದೆ.


ಇಂದು ಜನನಿಬಿಡ ಹುಬ್ಬಳಿ  ಜವಲಿಸಾಲ್ ಮಾರುಕಟ್ಟೆಯಲ್ಲಿ  ತರಕಾರಿ ಗಳನ್ನು ಕೊಂಡುಕೊಳ್ಳಲು  ಮುಗಿಬಿದ್ದ ಜನರನ್ನು ಪೋಲಿಸ್ ಸಿಬ್ಬಂದಿ ಚದುರಿಸಿ ಹೆಚ್ಚಿನ ಗುಂಪುಗಳು ಆಗದ ಹಾಗೆ ನೋಡಿಕೊಂಡದ್ದು ಕಂಡುಬಂತು. ಪೋಲಿಸ್ ಸಿಬ್ಬಂದಿ ಜನರಿಗೆ ತಿಳಿ ಹೇಳಿ ದಯಮಾಡಿ ಮನೆಯಲ್ಲಿ ಇರಿ ತಮಗೆಷ್ಟು ಬೇಕು ಅಷ್ಟೆ ತೆಗೆದುಕೊಂಡು ಹೋಗಿ, ನಾಳೆ ಮತ್ತೆ ಸಿಗುತ್ತದೆ ಎಂದು ಹೇಳುತ್ತಿರುವುದು ಕಂಡುಬಂತು.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com