ಕೊರೊನಾ ಹಿನ್ನೆಲೆ: ಡಾ. ಸುಧಾಕರ್ ಗೆ ಬೆಂಗಳೂರು ಉಸ್ತುವಾರಿ, ಶ್ರೀರಾಮುಲುಗೆ ರಾಜ್ಯದ ಜವಾಬ್ದಾರಿ

ರಾಜ್ಯದಲ್ಲಿ ಕೊರೋನಾವೈರಸ್ ನಿಯಂತ್ರಿಸುವ ಜವಾಬ್ದಾರಿಯನ್ನು ಆರೋಗ್ಯ ಸಚಿವೆ ಬಿ. ಶ್ರೀರಾಮುಲು ಅವರಿಗೆ ನೀಡಿದ್ದು ಬೆಂಗಳೂರು ಮಹಾನಗರದ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಗೆ ವಹಿಸಲಾಗಿದೆ.
ಬಿ. ಶ್ರೀರಾಮುಲು, ಡಾ. ಸುಧಾಕರ್
ಬಿ. ಶ್ರೀರಾಮುಲು, ಡಾ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾವೈರಸ್ ನಿಯಂತ್ರಿಸುವ ಜವಾಬ್ದಾರಿಯನ್ನು ಆರೋಗ್ಯ ಸಚಿವೆ ಬಿ. ಶ್ರೀರಾಮುಲು ಅವರಿಗೆ ನೀಡಿದ್ದು ಬೆಂಗಳೂರು ಮಹಾನಗರದ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಗೆ ವಹಿಸಲಾಗಿದೆ.

ಜತೆಗೆ ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜತೆಗೆ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.

ಇದೇ ವೇಳೆ ಶ್ರೀರಾಮುಲು ಅವರಿಗೆ ಸರಿಸಮನಾಗಿ ಸುಧಾಕರ್ ಅವರಿಗೆ ಜವಬ್ದಾರಿ ನೀಡಿರುವುದು ಶ್ರೀರಾಮುಲು ಅವರಿಗೆ ಅಸಮಾಧಾನಕ್ಕೆ ಕಾರಣವಾಗಿದ್ದು ಅವರು ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಹ ದೂರು ಸಲ್ಲಿಸಿದ್ದರು. 

ಇಂದು ಈ ಕುರಿತು ಮಾದ್ಯಮಗಳ ಜತೆ ಮಾತನಾಡಿದ ಡಾ.ಸುಧಾಕರ್ "ಕೊರೋನಾ ವಿರುದ್ಧ ಹೋರಾಟಕ್ಕೆ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಯಾರೋ ಒಬ್ಬರು ಮಾನಿಟರ್ ಮಾಡುವ ಹಾಗಿರಬೇಕು. ಆ ಒಬ್ಬರು ಉತ್ತಮವಾಗಿ ಅದನ್ನು ನಿಭಾಯಿಸಬೇಕು. ಆದರೆ ಜವಾಬ್ದಾರಿಗಳು ಹಂಚಿಕೆಯಾದ ವೇಳೆ ಗೊಂದಲವಾಗುತ್ತದೆ. ಹಿರಿಯರಾದ ಶ್ರೀರಾಮುಲು ಕೈಕೆಳಗೆ ಕೆಲಸ ಮಾಡಲು ನಾನು ಸಿದ್ದ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com