ಸಿಎಂ ಸಭೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್!

ಮಹಾಮಾರಿ ಕೊರೋನಾ ವೈರಸ್ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ನಡೆಸುತ್ತಿದ್ದ ಸಭೆಯಿಂದ ಅರ್ಧದಲ್ಲೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕಣ್ಣೀರಿಡುತ್ತಾ ಹೊರಬಂದಿದ್ದಾರೆ. 
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ನಡೆಸುತ್ತಿದ್ದ ಸಭೆಯಿಂದ ಅರ್ಧದಲ್ಲೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕಣ್ಣೀರಿಡುತ್ತಾ ಹೊರಬಂದಿದ್ದಾರೆ. 

ಸಿಎಂ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಭಾಸ್ಕರ್ ರಾವ್ ನಡುವೆ ಮಾತಿನ ಜಟಾಪಟಿ ನಡೆಯಿತು. 

ಸೂಪರ್ ಮಾರ್ಕೆಟ್ ನವರಿಂದ ಹಣ ಪಡೆದು ಪೊಲೀಸ್ ಆಯುಕ್ತರು ಸೂಪರ್ ಮಾರ್ಕೆಟ್ ತೆಗೆಯಲು ಅವಕಾಶ ನೀಡಿದ್ದಾರೆ ಎಂದು ಅಶ್ವಥ್ ನಾರಾಯಣ್ ಅವರು ಆರೋಪಿಸಿದರು. ಇದಕ್ಕೆ ಭಾಸ್ಕರ್ ರಾವ್ ಅವರು ನಿಮ್ಮ ಬಳಿ ಸಾಕ್ಷಿ ಇದೆ ತೋರಿಸಿ ಎಂದು ಪ್ರತಿ ಸವಾಲು ಹಾಕಿದರು. ಇದಕ್ಕೆ ಅಶ್ವತ್ ನಾರಾಯಣ ನಮ್ಮ ಬಳಿ ವಿಡಿಯೋ ಸಾಕ್ಷಿ ಇದೆ ಎಂದು ಹೇಳಿದರು.

ಪಾಸ್ ವಿತರಣೆ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಿಕಿ ನಡೆಯಿತು. ಆನ್ ಲೈನ್ ಫುಡ್ ಡೆಲಿವಿರಿ ಕಂಪನಿಯ ಸಿಬ್ಬಂದಿಗೆ ಹೆಚ್ಚು ಪಾಸ್ ನೀಡುವಂತೆ ಅಶ್ವಥ್ ನಾರಾಯಣ ಕೇಳಿದರೂ ಇದಕ್ಕೆ ಭಾಸ್ಕರ್ ರಾವ್ ಅವರು ಒಪ್ಪದ ಕಾರಣ ನಂತರ ಅಶ್ವಥ್ ನಾರಾಯಣ ಅವರು ಏಕವಚನದಲ್ಲಿ ಮಾತನಾಡಿದರು. 

ಇದರಿಂದ ಭಾವುಕರಾದ ಭಾಸ್ಕರ್ ರಾವ್ ಅವರು ಕಣ್ಣೀರಿಡುತ್ತಾ ಹೊರಬಂದರು. ಸಿಎಂ ಅವರೇ ಸಮಾಧಾನ ಪಡಿಸಲು ಯತ್ನಿಸಿದರು ಪೊಲೀಸ್ ಆಯುಕ್ತರು ಅಲ್ಲಿ ನಿಲ್ಲದೆ ಹೊರಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com