ಕೊರೋನಾ ವೈರಸ್ ಎಫೆಕ್ಟ್: ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಮುಂದೂಡಿಕೆ

ಕೊರೋನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಡೀ ದೇಶ ಲಾಕ್ ಡೌನ್ ಮಾಡಿರುವ ಕಾರಣ 2020ರ ಏಪ್ರಿಲ್ 11 ರಂದು ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯನ್ನು ಮುಂದೂಡಲಾಗಿದೆ.

Published: 26th March 2020 04:59 PM  |   Last Updated: 26th March 2020 04:59 PM   |  A+A-


Centre directs its employees to work in three shifts to tackle coronavirus spread

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬೆಂಗಳೂರು: ಕೊರೋನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಡೀ ದೇಶ ಲಾಕ್ ಡೌನ್ ಮಾಡಿರುವ ಕಾರಣ 2020ರ ಏಪ್ರಿಲ್ 11 ರಂದು ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯನ್ನು ಮುಂದೂಡಲಾಗಿದೆ.

ಕೊವಿಡ್ 19 ನಿಯಂತ್ರಣ ಸಂಬಂಧ 21 ದಿನಗಳ ಕಾಲ ಇಡೀ ದೇಶ ಲಾಕ್ ಡೌನ್ ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಆದ ಕಾರಣ ಟಿಇಟಿ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp