ಗೌರಿಬಿದನೂರಿನಲ್ಲಿ ಮೃತಪಟ್ಟ ವೃದ್ಧೆಯಲ್ಲಿ ಸೋಂಕು ದೃಢ- ರಾಜ್ಯದಲ್ಲಿ ಕೋವಿಡ್ -19 ಮೃತರ ಸಂಖ್ಯೆ 2ಕ್ಕೇರಿಕೆ

 ಗೌರಿಬಿದನೂರಿನಲ್ಲಿ ನಿನ್ನೆ ಮೃತಪಟ್ಟ ವೃದ್ಧೆಯ ವೈದ್ಯಕೀಯ ವರದಿ ಬಂದಿದ್ದು,ಕೋವಿಡ್ -19 ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ.ಇದರಿಂದಾಗಿ  ರಾಜ್ಯದಲ್ಲಿ ಕೊರೋನಾ ದಿಂದ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ
ಶ್ರೀರಾಮುಲು
ಶ್ರೀರಾಮುಲು

ಬಳ್ಳಾರಿ:  ಗೌರಿಬಿದನೂರಿನಲ್ಲಿ ನಿನ್ನೆ ಮೃತಪಟ್ಟ ವೃದ್ಧೆಯ ವೈದ್ಯಕೀಯ ವರದಿ ಬಂದಿದ್ದು,ಕೋವಿಡ್ -19 ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ.ಇದರಿಂದಾಗಿ  ರಾಜ್ಯದಲ್ಲಿ ಕೊರೋನಾ ದಿಂದ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 52 ಪಾಸಿಟಿವ್ ಕೇಸ್ ಪತ್ತೆಯಾಗಿದೆ. 1.30  ಲಕ್ಷ ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು. 214 ಜನರನ್ನು ಐಸೋಲೇಷನ್ ವಾರ್ಡ್  ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. 

ಬಳ್ಳಾರಿ ಜಿಲ್ಲೆಯಿಂದ ಪ್ರವಾಸ ಪ್ರಾರಂಭ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಕುರಿತು ಪರಿಶೀಲನಾ  ಸಭೆ ನಡೆಸಿ,ಬೇಕಾದ ಎಲ್ಲಾ ಸೌಲಭ್ಯ ಮಾಡಿಕೊಡಲು ಸೂಚಿಸುತ್ತೇನೆಂದರು. 

ಕೇಂದ್ರ  ಸರಕಾರದ ನಿಯಮಗಳನ್ನು ಜನತೆ  ಪಾಲನೆ ಮಾಡಬೇಕು. ಲಾಕ್‌ಡೌನ್‌ ಮತ್ತು ಕೊರೋನಾ ತಡೆ ಕ್ರಮಗಳ ಬಗ್ಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಮಾಹಿತಿ  ಪಡೆಯುತ್ತಿದ್ದಾರೆ. ಜನರು ಆತಂಕ ಪಡುವುದು ಬೇಡ, ಆದರೆ ಮುಂಜಾಗ್ರತೆ ಕೈಗೊಳ್ಳಬೇಕು. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲು ಸೂಚಿಸುವೆ ಎಂದು ಶ್ರೀರಾಮುಲು ಭರವಸೆ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com