ಸ್ಟಾಂಪ್ ಮಾಡಿದ, ಐಸೋಲೇಷನ್ ನಲ್ಲಿರುವವರು ಸಂಪರ್ಕಿಸಿದ ಎಲ್ಲರಿಗೂ ಮುದ್ರೆ

ಕೊರೋನಾವೈರಸ್  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ  ಮುದ್ರೆ ಹಾಕಿದ ಮತ್ತು ಐಸೋಲೇಷನ್ ನಲ್ಲಿರುವ  ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಂಪರ್ಕಿಸಿದ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಜನರ ಮೇಲೂ ಮುದ್ರೆ ಹಾಕಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೈಗೆ ಕೊರೋನಾ ಮುದ್ರೆ
ಕೈಗೆ ಕೊರೋನಾ ಮುದ್ರೆ

ಬೆಂಗಳೂರು: ಕೊರೋನಾವೈರಸ್  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ  ಮುದ್ರೆ ಹಾಕಿದ ಮತ್ತು ಐಸೋಲೇಷನ್ ನಲ್ಲಿರುವ  ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಂಪರ್ಕಿಸಿದ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಜನರ ಮೇಲೂ ಮುದ್ರೆ ಹಾಕಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೋನಾವೈರಸ್ ಸಮುದಾಯ ಹಂತ ತಲುಪದಂತೆ ಪರೀಕ್ಷಿಸಲು ಈಗಾಗಲೇ ಮುದ್ರೆ ಹಾಕಲಾದ ಹಾಗೂ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳು ಸಂಪರ್ಕಿಸಿದ ಎಲ್ಲಾ  ಪ್ರಾಥಮಿಕ ಮತ್ತು ದ್ವಿತೀಯ ಜನರಿಗೂ ಮುದ್ರೆ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಬಿಬಿಎಂಪಿ ಆಯುಕ್ತ  ಆಯುಕ್ತ ಬಿ. ಹೆಚ್ . ಅನಿಲ್ ಕುಮಾರ್  ಟ್ವೀಟ್ ಮಾಡಿದ್ದಾರೆ.

ರಾಜ್ಯಾದ್ಯಂತ ಹೋಮ್ ಕ್ವಾರೆಂಟೈನ್ ಮಾಡಲಾಗಿರುವ  ಜನರ ಪಟ್ಟಿಯನ್ನು ಅನಿಲ್ ಕುಮಾರ್ ಶೇರ್ ಮಾಡಿದ್ದಾರೆ.  ಆದರೆ, ಅವರ ಹೆಸರನ್ನು ಉಲ್ಲೇಖಿಸಿಲ್ಲ, ವಿದೇಶದಿಂದ ಬಂದ ದಿನಾಂಕ, ಕ್ವಾರೆಂಟೈನ್ ನಲ್ಲಿರಬೇಕಾದ ಕೊನೆಯ ಅವಧಿ, ಮನೆ ನಂಬರ್, ಬೀದಿ, ಗ್ರಾಮ, ಜಿಲ್ಲೆ ಮತ್ತು ಪಿನ್ ಕೋಡ್ ನಂಬರ್ ನ್ನು ತಿಳಿಸಿದ್ದಾರೆ. 

ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಬುಧವಾರ 76 ಜನರು ಹೋಮ್ ಕ್ವಾರಂಟೀನ್ ನಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ 10 ಸಾವಿರ ಜನರಿಗೆ ಈಗಾಗಲೇ ಸ್ಟಾಂಪ್ ಹಾಕಲಾಗಿದ್ದು, ಹೋಮ್ ಕ್ವಾರೆಂಟೈನಲ್ಲಿದ್ದಾರೆ ಎಂದು ಅನಿಲ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com