ಕೊರೋನಾ ಭೀತಿ: ಮಡಿಕೇರಿಯಲ್ಲಿ 7 ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ ಜೊಡಿ!
ಎಲ್ಲೆಲ್ಲೂ ಕೊರೋನಾ ಭಿತಿ ಆವರಿಸಿರುವ ಈ ದಿನಗಳಲ್ಲಿ ಮದುವೆ, ಗೃಹಪ್ರವೇಶ ಸೇರಿ ಯಾವುದೇ ಶುಭ ಸಮಾರಂಬಗಳು ನಡೆಯುತ್ತಿಲ್ಲ. ಅದ್ದೂರಿ ಕಾರ್ಯಕರಮಕ್ಕೆ ನಗರಾಡಳಿತ ಅನುಮತಿಸದ ಕಾರಣ ಅನೇಕರು ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಆದರೆ ಮಡಿಕೇರಿಯಲ್ಲೊಂದು ಜೋಡಿ ತಾವು ಕೇವ;ಲ ಏಳು ಮಂದಿಯ ಸಮ್ಮುಖದಲ್ಲಿ ಹಸೆಮಣೆ ಏರಿ ಸರಳ ವಿವಾಹ ನೆರವೇರಿಸಿಕೊಂಡಿದೆ.
Published: 26th March 2020 01:29 PM | Last Updated: 26th March 2020 01:29 PM | A+A A-

ಕೊರೋನಾ ಭೀತಿ: ಮಡಿಕೇರಿಯಲ್ಲಿ 7 ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ ಜೊಡಿ!
ಮಡಿಕೇರಿ: ಎಲ್ಲೆಲ್ಲೂ ಕೊರೋನಾ ಭಿತಿ ಆವರಿಸಿರುವ ಈ ದಿನಗಳಲ್ಲಿ ಮದುವೆ, ಗೃಹಪ್ರವೇಶ ಸೇರಿ ಯಾವುದೇ ಶುಭ ಸಮಾರಂಬಗಳು ನಡೆಯುತ್ತಿಲ್ಲ. ಅದ್ದೂರಿ ಕಾರ್ಯಕರಮಕ್ಕೆ ನಗರಾಡಳಿತ ಅನುಮತಿಸದ ಕಾರಣ ಅನೇಕರು ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಆದರೆ ಮಡಿಕೇರಿಯಲ್ಲೊಂದು ಜೋಡಿ ತಾವು ಕೇವ;ಲ ಏಳು ಮಂದಿಯ ಸಮ್ಮುಖದಲ್ಲಿ ಹಸೆಮಣೆ ಏರಿ ಸರಳ ವಿವಾಹ ನೆರವೇರಿಸಿಕೊಂಡಿದೆ.
ಮಡಿಕೇರಿಯ ರಜಿತ್ ಮತ್ತು ಕಾಸರಗೋಡು ತಾಲೂಕಿನ ಅನುಷಾ ಹೀಗೆ ಮಡಿಕೇರಿಯಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.
ಈ ಜೋಡಿ ಕಳೆದ ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದೆ. ಅಲ್ಲದೆ ದಕ್ಷಿಣ ಕನ್ನಡ ಸುಳ್ಯ್ದ ಪುರಭವನದಲ್ಲಿ ಮದುವೆ ಸಮಾರಂಭ ನಡೆಸಲು ವಧು-ವರರ ಮನೆಯವರು ತೀರ್ಮಾನಿಸಿದ್ದರು. ಆದರೆ ಇದೀಗ ದೇಶಾದ್ಯಂತ ಕೊರೋನಾ ಕಾರಣ ಲಾಕ್ ಡೌನ್ ಆಗಿದ್ದು ಮದುವೆ ಮುಂದುಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಎರಡೂ ಕುಟುಂಬ ಮದುವೆ ಮುಂದೂಡಿಕೆ ಮಾಡುವ ಬದಲು ಮದುವೆಯ ಜಾಗ ಬದಲಾಯಿಸಿದೆ. ಅದರಂತೆ ಸುಳ್ಯ ಬದಲು ಮಡಿಕೇರಿಯ ಹೊರ ವಲಯದಲ್ಲಿರುವ ರಾಜರಾಜೇಶ್ವರಿ ದೇವಾಲಯದಲ್ಲಿ ಜೋಡಿ ಹಸೆಮಣೆ ಏರಿದೆ.
ಈ ವಿವಾಹ ಸಮಾರಂಭದಲ್ಲಿ ಕೇವಲ ಏಳು ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಧು ವರರು, ಅವರ ಪೋಷಕರು ಹಾಗೂ ದೇವಾಲಯದ ಅರ್ಚಕರು ಮಾತ್ರವೇ ಈ ಮದುವೆ ಸಮಾರಂಬದಲ್ಲಿ ಪಾಲ್ಗೊಂಡಿದ್ದರು.
"ನಾವು 500 ಮದುವೆ ಆಮಂತ್ರಣ ಪತ್ರಿಕೆ ಮಾಡಿಸಿ ಹಂಚಿದ್ದೆವು. ಕುಟುಂಬದ ಸದಸ್ಯರೆಲ್ಲಾ ಸೇರಿ ಅದ್ಧೂರಿಯಾಗಿ ಮದುವೆ ಆಗಬೇಕೆಂಬ ಆಸೆ ಇತ್ತು.ಆದರೆ ಕೊರೋನಾ ಹಾವಳಿಯ ಕಾರಣ ಈ ರೀತಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ" ವರ ರಜಿತ್ ಹೇಳಿದರು.