ಕೇರಳ ಮಾದರಿಯಲ್ಲಿ ಆಹಾರ ಧಾನ್ಯ, ಪರಿಹಾರ ನೀಡುವಂತೆ ಸಾಹಿತಿಗಳು, ಚಿಂತಕರಿಂದ ಮುಖ್ಯಮಂತ್ರಿಗೆ ಪತ್ರ

ಕೇರಳ ಮಾದರಿಯಲ್ಲಿ ಆಹಾರ ಧಾನ್ಯ, ಪರಿಹಾರ ನೀಡುವಂತೆ ಸಾಹಿತಿಗಳು ಹಾಗೂ ಚಿಂತಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ  ಕೇರಳ ಮಾದರಿಯಲ್ಲಿ ಆಹಾರ ಧಾನ್ಯ, ಪರಿಹಾರ ನೀಡುವಂತೆ ಸಾಹಿತಿಗಳು ಹಾಗೂ ಚಿಂತಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಎಲ್ಲಾ  ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಕೂಡಲೇ ಅವರ  ಬ್ಯಾಂಕ್ ಖಾತೆಗೆ ರೂ 5000 ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ  ತಾವು ಮಂಡಳಿಯ ನಿಧಿಯಿಂದ ಮಾಸಿಕ ರೂ. 1000 ನೆರವನ್ನು ಘೋಷಿಸಿರುವುದು ಸ್ವಾಗತಾರ್ಹ,  ಆದರೆ ಅದನ್ನು ಕೂಡಲೇ ರೂ. 3000 ಕ್ಕೆ ಹೆಚ್ಚಿಸಲು ಕ್ರಮವಹಿಸಬೇಕು. ಇತರೆ ಅಸಂಘಟಿತ  ಕಾರ್ಮಿಕರಿಗೂ ಇದೇ ರೀತಿಯ ಆರ್ಥಿಕ ನೆರವು ಸರಕಾರದ ಅನುದಾನದಲ್ಲಿ ಕೂಡಲೇ ಪ್ರಕಟಿಸಬೇಕು ಎಂದು ನಾಡಿನ ಹಿರಿಯ ಸಾಹಿತಿಗಳು, ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ  ಸಾಹಿತಿಗಳಾದ ಡಾ ಜಿ.ರಾಮಕೃಷ್ಣ (ಜಿ.ಆರ್), ಚಿದಂಬರ್ ರಾವ್ ಜಂಬೆ, ರಹಮತ್ ತರಿಕೆರೆ, ಕಾತ್ಯಾಯಿನಿ ಚಾಮರಾಜ್,ರೇಣುಕಾ ನಿಡುಗುಂದಿ, ಡಿ.ಎಸ್ ಚೌಗಲೆ ಸೇರಿ ಹಲವು ಪ್ರಗತಿಪರರರು, ಹಸಿದ ಹೊಟ್ಟೆಗೆ ಊಟ ಹಾಕುವಂತೆ ಮನವಿ ಮಾಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com