ಕಗ್ಗಂಟಾಗಿದ್ದ ನಂಜನಗೂಡಿನ ಕೊರೋನಾ ವೈರಸ್ ಸೋಂಕು ಪ್ರಕರಣದ ರಹಸ್ಯ ಬಯಲು!

ವಿದೇಶ ಪ್ರವಾಸ ಮಾಡದಿದ್ದರೂ ಕೊರೋನಾ ವೈರಸ್ ಗೆ ತುತ್ತಾಗಿ ಆತಂಕ ಸೃಷ್ಠಿಸಿದ್ದ ನಂಜನಗೂಡು ಪ್ರಕರಣದ ರಹಸ್ಯ ಇದೀಗ ಬಯಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ವಿದೇಶ ಪ್ರವಾಸ ಮಾಡದಿದ್ದರೂ ಕೊರೋನಾ ವೈರಸ್ ಗೆ ತುತ್ತಾಗಿ ಆತಂಕ ಸೃಷ್ಠಿಸಿದ್ದ ನಂಜನಗೂಡು ಪ್ರಕರಣದ ರಹಸ್ಯ ಇದೀಗ ಬಯಲಾಗಿದೆ. 

ಆಸ್ಪತ್ರೆಯಲ್ಲಿ ಅದಾಗಲೇ ಚಿಕಿತ್ಸೆ ಪಡೆಯುತ್ತಿರುವ ನಂಜನಗೂಡು ವ್ಯಕ್ತಿಗೆ ಯಾವುದೇ ವಿದೇಶ ಪ್ರವಾಸ ಮಾಡದ ಹಿನ್ನಲೆ ಇರಲಿಲ್ಲ. ಹೀಗಿದ್ದರೂ ಸೋಂಕಿಗೆ ತುತ್ತಾಗಿದ್ದು ಹೇಗೆ ಎಂಬ ಯಕ್ಷಪ್ರಶ್ನೆ ಉದ್ಭವವಾಗಿತ್ತು. 

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಂಕಿಗೆ ಸಂಬಂಧಿಸಿದಂತೆ ತನಿಖೆಕೈಗೊಂಡಿದ್ದರು. ಇದೀಗ ನಂಜನಗೂಡು ವ್ಯಕ್ತಿಗೆ ಕೊರೋನಾ ಬಂದಿದ್ದು ಆಸ್ಟ್ರೇಲಿಯಾದ ವ್ಯಕ್ತಿಯಿಂದ. ಹೌದು ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ವ್ಯಕ್ತಿಯಿದ್ದ ಕೋಣೆಯಲ್ಲಿ ಉಳಿದುಕೊಂಡಿದ್ದಾಗಿ ಮಾಹಿತಿ ಲಭ್ಯವಾಗಿದೆ. 

ಇದಗೀ ಕೊರೋನಾ ತಗಗಲು ಇದೇ ಕಾರಣ ಎಂದು ಅಂದಾಜಿಸಲಾಗಿದ್ದು ನಂಜನಗೂಡು ವ್ಯಕ್ತಿಗೆ ಸೋಂಕಿನ ಸಂಬಂಧ ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ. 

ಮೈಸೂರಿನಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಮೊದಲೆರಡು ಪ್ರಕರಣಗಳು ವಿದೇಶದಿಂದ ವಾಪಸ್ಸಾಗಿತ್ತು. ಆದರೆ ನಂಜನಗೂಡು ಪ್ರಕರಣ ಸ್ಥಳೀಯವಾಗಿದ್ದರಿಂದ ಗೊಂದಲ ಸೃಷ್ಠಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com