ಹೊಸತೊಡಕಿನ ಸಂಭ್ರಮದಲ್ಲಿ ನಗರದ ಜನತೆ: ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ಸರದಿ ಸಾಲು, ಗಗನಕ್ಕೇರಿದ ಮಾಂಸದ ಬೆಲೆ

ಯುಗಾದಿ ಮಾರನೇ ದಿನ ದಕ್ಷಿಣ ಕರ್ನಾಟಕದ ಜನತೆ ಮಾಂಸದೂಟ ಸೇವಿಸುವುದು ಸಂಪ್ರದಾಯ, ಅದಕ್ಕ ಸಿಲಿಕಾನ್ ಸಿಟಿಯ ಜನವೂ ಹೊರತಲ್ಲ, ಕೊರೋನಾ ಲೈರಸ್ ಸೋಂಕಿನ ಭೀತಿಯಿದ್ದರೂ ನಿನ್ನೆ ಬ್ಯಾಟರಾನಪುರದಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.
ಪಾಪಣ್ಣ ಮಟನ್ ಸ್ಟಾಲ್
ಪಾಪಣ್ಣ ಮಟನ್ ಸ್ಟಾಲ್

ಬೆಂಗಳೂರು: ಯುಗಾದಿ ಮಾರನೇ ದಿನ ದಕ್ಷಿಣ ಕರ್ನಾಟಕದ ಜನತೆ ಮಾಂಸದೂಟ ಸೇವಿಸುವುದು ಸಂಪ್ರದಾಯ, ಅದಕ್ಕ ಸಿಲಿಕಾನ್ ಸಿಟಿಯ ಜನವೂ ಹೊರತಲ್ಲ, ಕೊರೋನಾ ಲೈರಸ್ ಸೋಂಕಿನ ಭೀತಿಯಿದ್ದರೂ ನಿನ್ನೆ ಬ್ಯಾಟರಾನಪುರದಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.

ಪಾಪಣ್ಣ ಮಟನ್ ಸ್ಟಾಲ್ ನ ಖಾಯಂ ಗಿರಾಕಿಗಳು ನಿನ್ನೆ ಗಂಟೆಗಟ್ಟಲೇ ದೂರ ದೂರ ನಿಂತು ಸರದಿಯಲ್ಲಿ ಕಾದು ಮಾಂಸ ಖರೀದಿಸಿದ್ದಾರೆ,

73 ವರ್ಷದ ಹಿಂದೆ ಬ್ಯಾಟರಾಯನಪುರದಲ್ಲಿ ಆರಂಭವಾದ ಈ ಅಂಗಡಿ ಮೈಸೂರು ರೋಡ್ ನಲ್ಲಿದೆ ಕನಕಪುರ, ರಾಮನಗರ ಮತ್ತು ಮಾಗಡಿ ಗಳಿಂದ ಕುರಿಗಳನ್ನು ತಂದು ಕಟ್ ಮಾಡಿ ಮಾರಲಾಗುತ್ತದೆ. ಉತ್ತಮ ಗುಣಮಟ್ಟದ ಮಾಂಸ ನೀಡುವುದರಿಂದ ಬೆಂಗಳೂರಿನ ಹಲವು ಕಡೆಯಿಂದ ಇಲ್ಲಿಗೆ ಬರುತ್ತಾರೆ. ಸದ್ಯ ಪಾಪಣ್ಣ ಅವರ ಮೊಮ್ಮಗ ಈ ಅಂಗಡಿ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಯುಗಾದಿ ಮಾರನೇ ದಿನ ಅಧಿಕ ಮಂದಿ ಮಟನ್ ಖರೀದಿಸಲು ಬರುತ್ತಾರೆ. ಈ ಬಾರಿ 1,500 ಕೆಜಿ ಮಾರಾಟವಾಗುತ್ತದೆ ಎಂದು ನಿರೀಕ್ಷಿಸಿದ್ದೆವು, ಆದರೆ ಕೊರೋನಾ ಭೀತಿಯಿಂದಾಗಿ ಖರೀದಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.  ಬೆಳಗ್ಗೆ 6 ಗಂಟೆಗೆ  ಅಂಗಡಿ ತೆರದಿದ್ದೆವು.ಆದರೆ ತೀರಾ ಕಡಿಮೆ ವ್ಯಾಪಾರ ನಡೆದಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಕೆಜಿಗೆ 550-600 ರು ಇದ್ದ  ಬೆಲೆ 750ಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com