ಧರ್ಮಸ್ಥಳ ನಂದಾದೀಪ ನಂದಿಹೋದ ವದಂತಿ ಸುಳ್ಳು-ಡಾ. ವೀರೇಂದ್ರ ಹೆಗ್ಗಡೆ ಸ್ಪಷ್ಟನೆ

ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ನಂದಾದೀಪ ಆರಿ ಹೋಗಿದ್ದು ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ದೀಪವಿಟ್ಟು ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಸಾಮಾಜಿಕ ತಾಣಗಳಲ್ಲಿ ವದಂತಿಯೊಂದು ಹರಿದಾಡುತ್ತಿದ್ದು ಈ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ.
ಧರ್ಮಸ್ಥಳ ನಂದಾದೀಪ ನಂದಿಹೋದ ವದಂತಿ ಸುಳ್ಳು-ಡಾ. ವೀರೇಂದ್ರ ಹೆಗ್ಗಡೆ ಸ್ಪಷ್ಟನೆ
ಧರ್ಮಸ್ಥಳ ನಂದಾದೀಪ ನಂದಿಹೋದ ವದಂತಿ ಸುಳ್ಳು-ಡಾ. ವೀರೇಂದ್ರ ಹೆಗ್ಗಡೆ ಸ್ಪಷ್ಟನೆ

ಬೆಳ್ತಂಗಡಿ: ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ನಂದಾದೀಪ ಆರಿ ಹೋಗಿದ್ದು ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ದೀಪವಿಟ್ಟು ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಸಾಮಾಜಿಕ ತಾಣಗಳಲ್ಲಿ ವದಂತಿಯೊಂದು ಹರಿದಾಡುತ್ತಿದ್ದು ಈ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ಹಾವೇರಿ, ಚನ್ನಗಿರಿ ಸೇರಿ ಅನೇಕ ಭಾಗಗಲ ಜನರ ವಾಟ್ಸ್ ಅಪ್ ಗೆ ನಂದಾದೀಪ ಸಂಬಂಧದ ಸಂದೇಶ ಬಂದಿದ್ದು ರಾತ್ರೋರಾತ್ರಿ ಜನರು ತಮ್ಮ ತಮ್ಮ ಮನೆಗಳನ್ನು ಶುದ್ದೀಕರಿಸಿ ಮನೆ ಮುಂದೆ ದೀಪ ಹಚ್ಚಿದ್ದಾರೆ.

ಈ ಕುರಿತು ಸ್ಪಷ್ಟನೆ ನಿಡಿರುವ ವೀರೇಂದ್ರ ಹೆಗ್ಗಡೆ ಪ್ರತಿದಿನವೂ ದೇವಾಲಯ ರಾತ್ರಿ ಎಂಟಕ್ಕೆ ಬಾಗಿಲು ಮುಚ್ಚಿದರೆ ಮರುದಿನ ಬೆಳಿಗ್ಗೆ ಐದಕ್ಕೆ ತೆರೆಯುತ್ತದೆ.ಈ ನಡುವೆ ದೇವಾಲಯ ಪ್ರವೇಶಕ್ಕೆ ಯಾರೊಬ್ಬರಿಗೂ ಅವಕಾಶವಿಲ್ಲ. ಬೀಗಮುದ್ರೆ ಹಾಕಿದ ಬಳಿಕ ದೇವಾಲಯ ಪ್ರವೇಶಿಸುವವರು ಯಾರು?  ನಂದಾದೀಪ ನಂದಿಹೋಗಿರುವುದನ್ನು ನೋಡಿದ್ದು ಯಾರು? ಇದು ಕ್ಷೇತ್ರದ ಭಕ್ತಾದಿಗಳ ಭಾವನೆ ಹಾಗೂ ನಂಬಿಕೆಯೊಡನೆ ಕೆಲವು ಕಿಡಿಗೇಡಿಗಳು ಮಾಡಿರುವ ಸುಳ್ಳು ವದಂತಿಯಾಗಿದೆ ಎಂದಿದ್ದಾರೆ.

"ಈ ವದಂತಿಯಿಂದ ನೀವೆಲ್ಲರೂ ದೂರವಿದ್ದು ಲೋಕಕ್ಕೆ ಬಂದಿರುವ ಕೊರೋನಾ  ಎಂಬ ಮಹಾಮಾರಿಯನ್ನು ಮನುಜ ಕುಲದಿಂದ ದೂರಮಾಡಲು ಅವರವರ ಮನೆಯೊಳಗೇ ಇದ್ದು ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳಿ" ಅವರು ಭಿನ್ನವಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com