ಕೊರೋನಾ ವೈರಸ್: ಮೈಸೂರಿನಲ್ಲಿ ಒಂದೇ ದಿನ 5 ಸೋಂಕು ಪ್ರಕರಣಗಳು ಪತ್ತೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿಕೆ

ಮಾರಕ ಕೊರೋನಾ ವೈರಸ್ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ತನ್ನ ಕರಿಛಾಯೆ ಚಾಚಿದ್ದು, ಇಂದು ಒಂದೇ ಮೈಸೂರಿನಲ್ಲಿ ಐದು ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ.
ಮೈಸೂರು ಲಾಕ್ ಡೌನ್
ಮೈಸೂರು ಲಾಕ್ ಡೌನ್

ಮೈಸೂರು: ಮಾರಕ ಕೊರೋನಾ ವೈರಸ್ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ತನ್ನ ಕರಿಛಾಯೆ ಚಾಚಿದ್ದು, ಇಂದು ಒಂದೇ ಮೈಸೂರಿನಲ್ಲಿ ಐದು ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ.

ಈ ಐವರು ಸೋಂಕಿತರ ಪೈಕಿ ನಂಜನ ಗೂಡು ಒಂದರಲ್ಲೇ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ನಂಜನಗೂಡಿನ ಚಾಮುಂಡಿಪುರ ಎಕ್ಸ್ ಟೇನ್ಷನ್, ರಾಮಸ್ವಾಮಿ ಲೇಔಟ್, ಗೋವಿಂದ್ ರಾಜ್ ಲೇಔಟ್ ಈ ಪ್ರಕರಣಗಳು ದಾಖಲಾಗಿವೆ. ಯರಗಾನ ಹಳ್ಳಿಯಲ್ಲಿ ಮತ್ತೊಂದು ಸೋಂಕು  ಪ್ರಕರಣ ದಾಖಲಾಗಿದ್ದು, ಈ ಎಲ್ಲ ಸೋಂಕಿತರು ಪೇಷೆಂಟ್ ನಂಬರ್ 52 (ಮೈಸೂರಿನಲ್ಲಿ 3ನೇ ಪ್ರಕರಣ) ಅನ್ನು ಸಂಪರ್ಕಿಸಿದ್ದರು ಎಂದು ತಿಳಿದುಬಂದಿದೆ, ಪ್ರಸ್ತುತ ಎಲ್ಲ ಸೋಂಕಿತರನ್ನು ಚಿಕಿತ್ಸೆಗೆ ರವಾನಿಸಲಾಗಿದೆ. ಅಲ್ಲದೆ ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ತೀವ್ರ ನಿಗಾ  ಇರಿಸಲಾಗಿದೆ.

ಈಗಾಗಲೇ ನಂಜನಗೂಡಿನಲ್ಲಿ 1000 ಜನರ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಇವರಲ್ಲಿ ಶೇ.8ರಷ್ಟು ಮಂದಿಯನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಉಳಿದವರನ್ನು 14 ದಿನಗಳ ಕಾಲ ಹೋಮ್ ಐಸೋಲೇಶನ್ ಒಳಪಡಿಸಲಾಗಿದೆ. ಒಟ್ಟು 59 ಮಂದಿಯ ಸ್ಯಾಂಪಲ್ ಗಳನ್ನು  ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 56 ವ್ಯಕ್ತಿಗೆ ನೆಗೆಟಿವ್ ಬಂದಿದೆ. 

ಮೊದಲಿಗೆ ನಂಜನಗೂಡಿನ ಔಷಧಿ ಉತ್ಪಾದನೆ ಕಂಪನಿಯಲ್ಲಿ ಗುಣಮಟ್ಟದ ಭರವಸೆ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ 35 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈತನಿಂದಲೇ ಇತರೆ ಮಂದಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು, ನಂಜನಗೂಡಿನಲ್ಲಿ 4 ಮಂದಿಗೆ ಹಾಗೂ ಮೈಸೂರು ನಗರ ನಿವಾಸಿಯೊಬ್ಬರಿಗೆ ಸೋಂಕು ತಗುಲಿದೆ. ಮೊನ್ನೆಯಷ್ಟೇ ನಂಜನಗೂಡಿನ ಔಷಧ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ  ಕೋವಿಡ್ ಪತ್ತೆಯಾಗಿತ್ತು. ಈಗ ಪತ್ತೆಯಾಗಿರುವ ಐವರು ಇದೇ ಕಾರ್ಖಾನೆಯ ನೌಕರರಾಗಿದ್ದಾರೆ. ನಂಜನಗೂಡು ಪಟ್ಟಣವನ್ನು ಶನಿವಾರ ರಾತ್ರಿಯಿಂದಲೇ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಮಾರ್ಚ್​ 21ನೇ ತಾರೀಕಿನಂದು ದುಬೈನಿಂದ ಮೈಸೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ಮಾ.23ರಂದು ದುಬೈನಿಂದ ಮೈಸೂರಿಗೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯಲ್ಲೂ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಈ  ಇಬ್ಬರನ್ನೂ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆಯೇ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿ ಕೊರೋನಾ ಬಂದಿದೆ. ಈತನಿಂದ ಮತ್ತೀಗ ಐವರಿಗೆ ಸೋಂಕು ತಗುಲಿದ್ದು, ಈಗ ಒಟ್ಟು 8 ಮಂದಿಗೆ ಕೊರೋನಾ  ಪಾಸಿಟಿವ್ ಪತ್ತೆಯಾಗಿದೆ. ಇವರಲ್ಲಿ ಶೇ.8ರಷ್ಟು ಮಂದಿಯನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಉಳಿದವರನ್ನು 14 ದಿನಗಳ ಕಾಲ ಹೋಮ್ ಐಸೋಲೇಶನ್ ಮುಗಿಸಿದ್ದಾರೆ. ಒಟ್ಟು 59 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 56 ವ್ಯಕ್ತಿಗೆ ನೆಗೆಟಿವ್ ಬಂದಿದೆ.

ಮುಂಜಾಗ್ರತಾ ಕ್ರಮವಾಗಿ ನಂಜನಗೂಡಿನಲ್ಲಿ ಇಂದು ಮಧ್ಯರಾತ್ರಿಯಿಂದಲೇ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಂತೆಯೇ ನಾಗರಿಕರು ಹೊರಗೆ ಬಾರದೇ ಅಧಿಕಾರಿಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com