ಶಿರಾವನ್ನು 'ಕೊರೋನಾ ಹಾಟ್'ಸ್ಪಾಟ್' ಮಾಡಿಸಿದ ಧರ್ಮಪ್ರಚಾರಕರನ ದೆಹಲಿ ಪ್ರವಾಸ!

ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಹಾವಳಿ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಧರ್ಮ ಪ್ರಚಾರಕರೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಹಾವಳಿ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಧರ್ಮ ಪ್ರಚಾರಕರೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

65 ವರ್ಷದ ಈ ಧರ್ಮ ಪ್ರಚಾರಕ ಮಾರ್ಚ್ 5 ರಂದು ದೆಹಲಿಯ ಜಾಮಿಯಾ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲು 13 ಮಂದಿ ಸಹಚರರೊಂದಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ಮಾರ್ಚ್ 7 ರಂದು ಮಧ್ಯಾಹ್ನ 3.30ಕ್ಕೆ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ಇಳಿದ ಮೃತ ವ್ಯಕ್ತಿ ಸೇರಿ 14 ಮಂದಿ ಟ್ಯಾಕ್ಸಿ ಮೂಲಕ ಜಾಮಿಯಾ ಮಸೀದಿ ತೆರಹಳಿದ್ದರು. 

ಮಾ.7ರಿಂದ ಮಾ.11ರವರೆಗೆ ಜಾಮಿಯಾ ಮಸೀದಿ ಬಳಿಯೇ ಉಳಿದುಕೊಂಡು ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಮಾ,11ರಂದು ಬೆಳಿಗ್ಗೆ 9 ಗಂಟೆಗೆ ಕಾಂಗೋ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಹೊರಟರು. ರೈಲು ಮಾ.14ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು. ಅಂದೇ ಬೆಂಗಳೂರು-ಚಿತ್ರದುರ್ಗ ಮಾರ್ಗದ ಬಸ್ಸಿನಲ್ಲಿ ಈ 14 ಮಂದಿ ಶಿರಾಗೆ ಬಂದಿಳಿದಿದ್ದರು. 
ಬಂದ ದಿನದಿಂದಲೇ ಮನೆಯಲ್ಲಿಯೇ ಉಳಿದಿದ್ದ ಇವರಿಗೆ  ಮಾ.18ರಂದು ಜ್ವರ ಹಾಗೂ ವಿಪರೀತ ಕೆಮ್ಮು ಕಾಣಿಸಿಕೊಂಡಿತ್ತು. ಕೂಡಲೇ ಶಿರಾದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಬಂದಿದ್ದರು. ಆದರೆ, ಆದರೆ, ಕೆಮ್ಮು ಕಮ್ಮಿಯಾಗದೆ ಮತ್ತಷ್ಟು ಹೆಚ್ಚಾಗಿತ್ತು. ಜ್ವರ ಕೂಡ ಕಡಿಮೆಯಾಗಿರಲಿಲ್ಲ. ಆಗ ಮತ್ತೊಮ್ಮೆ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿನ ವೈದ್ಯರು ಎಕ್ಸರೇ, ರಕ್ತ ಪರೀಕ್ಷೆ ನಡೆಸಿ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. 

ಬಳಿಕ ಎರಡು ದಿನಗಳ ಜಿಲ್ಲಾಸ್ಪತ್ರೆಗೆ ಹೋಗದೆ ಶಿರಾದಲ್ಲೇ ಉಳಿದ ಈತ 23ರಂದು ಮತ್ತೆ ಆರೋಗ್ಯ ಬಿಗಡಾಯಿಸಿದ್ದರಿಂದ ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಹೋದರು. ವೈದ್ಯರ ಕೆಲ ಮಾತ್ರೆಗಳನ್ನು ಕೊಟ್ಟು ಕಳುಹಿಸಿದ್ದರು. ಅಲ್ಲಿದಂ ಆತ ಮತ್ತೆ ಶಿರಾಕ್ಕೆ ಹೊರಟರು. ಆದರೆ, ಮಧ್ಯರಾತ್ರಿ ವಿಪರೀತ ಕೆಮ್ಮು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪುನಃ ಜಿಲ್ಲಾಸ್ಪತ್ರೆಗೆ ಬಂದರು. ಆಗ ಅವರನ್ನು ತಪಾಸಣೆ ನಡೆಸಿದ ಜಿಲ್ಲಾಸ್ಪತ್ರೆ ವೈದ್ಯರು, ಆಸ್ಪತ್ರೆಯಲ್ಲೇ ನಿರ್ಮಿಸಿದ್ದ ಐಸೋಲೇಷನ್ ವಾರ್ಡ್'ಗೆ ದಾಖಲು ಮಾಡಿಕೊಂಡರು. ಬಳಿಕ ಆತನ ರಕ್ತ ಮಾದರಿ, ಕಫ ಪರೀಕ್ಷೆಯನ್ನು ರವಾನಿಸಿದ್ದರು. 

ಜಿಲ್ಲಾಸ್ಪತ್ರೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದರೂ ಕೂಡ ಖಾಸಗಿ ಆಸ್ಪತ್ರೆಗೆ ಈತ ಹೋಗಿ ವಾಪಸ್ ಜಿಲ್ಲಾಸ್ಪತ್ರೆಗೆ ಬಂದಿದ್ದ. 26ರಂದು ರಾತ್ರಿ 10.30ಕ್ಕೆ ಈ ವ್ಯಕ್ತಿಯಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಮಾರ್ಚ್ 27ರಂದು ಬೆಳಿಗ್ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು 10.30ಕ್ಕೆ ಈತ ಜಿಲ್ಲಾಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಕುಟುಂಬದ 20 ಮಂದಿಯನ್ನು ಐಸೋಲೇಟೆಡ್ ಮಾಡಲಾಗಿದ್ದು, ಅದರಲ್ಲಿ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದವರ 8 ಜನರ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು, ಅವು ನೆಗೆಟಿವ್ ಬಂದಿದೆ. ಉಳಿದಂತೆ 16 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಇನ್ನೂ ಬಾಕಿಯಿದೆ. ಮೃತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ 13 ಮಂದಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು. 

ಮೃತ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು, ಇವರ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದಂತೆ 9 ಮಕ್ಕಳು ಹಾಗೂ 7 ಮಂದಿ ಮೊಮ್ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com