ಕೊರೋನಾ ವಿರುದ್ಧ ಹೋರಾಡಲು ಪಿಪಿಇ, ಟೆಸ್ಟ್ ಕಿಟ್, ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿ- ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ಮನವಿ

ಕೊರೋನಾ ವೈರಸ್ ವಿರುದ್ದ ಹೋರಾಡಲು ಪಿಪಿಇ, ಟೆಸ್ಟ್ ಕಿಟ್, ಎನ್95 ಮಾಸ್ಕ್'ಗಳು, ವೈದ್ಯಕೀಯ ಕಿಟ್'ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಇತ್ತೀಚಗಷ್ಟೇ ರಚನೆ ಮಾಡಲಾದ ಕೋವಿಡ್-19 ಸ್ಪೆಷಲ್ ಟಾಸ್ಕ್ ಫೋರ್ಸ್ ಮನವಿ ಮಾಡಿಕೊಂಡಿದೆ. 

Published: 28th March 2020 09:08 AM  |   Last Updated: 28th March 2020 09:08 AM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಕೊರೋನಾ ವೈರಸ್ ವಿರುದ್ದ ಹೋರಾಡಲು ಪಿಪಿಇ, ಟೆಸ್ಟ್ ಕಿಟ್, ಎನ್95 ಮಾಸ್ಕ್'ಗಳು, ವೈದ್ಯಕೀಯ ಕಿಟ್'ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಇತ್ತೀಚಗಷ್ಟೇ ರಚನೆ ಮಾಡಲಾದ ಕೋವಿಡ್-19 ಸ್ಪೆಷಲ್ ಟಾಸ್ಕ್ ಫೋರ್ಸ್ ಮನವಿ ಮಾಡಿಕೊಂಡಿದೆ. 

ಈಗಾಗಲೇ ರಾಜ್ಯದಲ್ಲಿ 64 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಮುಂದಿನ ದಿನಗಳಲ್ಲಿ ವೈರಸ್ ಕುರಿತಂತೆ ಸಿದ್ಧತೆಗಳನ್ನು ನಡೆಸಲು ಅಗತ್ಯ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. 

ಪಿಪಿಇ, ವೈದ್ಯಕೀಯ ಕಿಟ್ ಹಾಗೂ ಎನ್95 ಮಾಸ್ಕ್ ಗಳನ್ನು ದೇಶಕ್ಕೆ ಚೀನಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳು ಒದಗಿಸುತ್ತಿದ್ದವು. ಆದರೆ, ಇದೀಗ ಅದೇ ರಾಷ್ಟ್ರದಲ್ಲಿ ವೈರಸ್ ತಾಂಡವವಾಡುತ್ತಿದ್ದು, ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ಈಗಾಗಲೇ ಸಾಕಷ್ಟು ರಾಷ್ಟ್ರಗಳು ಸಾಲಿನಲ್ಲಿದ್ದು, ಭಾರತ ಕೂಡ ಸಾಲಿನಲ್ಲಿದೆ. ವೈದ್ಯಕೀಯ ಸಲಕರಣಗೆಲು ಬರುವುದು ತಡವಾಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಸರ್ಕಾರ ಈ ಸಂಬಂಧ ಗಮನಹರಿಸಿದ್ದು, ಶೀಘ್ರಗತಿಯಲ್ಲಿ ವೈದ್ಯಕೀಯ ಸಲಕರಣೆ ಪಡೆದುಕೊಳ್ಳಲು ಸತತ ಯತ್ನ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

21 ಲಾಕ್ ಡೌನ್ ಆಗುವುದಕ್ಕೂ ಮುನ್ನ ರಾಷ್ಟ್ರಕ್ಕೆ ಬಂದ ಪ್ರತೀಯೊಬ್ಬರನ್ನು ಪರೀಕ್ಷೆಗೊಳಪಡಿಸುವಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೆರಾಲಜಿಕಲ್ ಕಿಟ್ ಗಳ ಅಗತ್ಯತೆ ಹೆಚ್ಚಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

3 ವಾರಗಳ ಲಾಕ್ ಡೌನ್ ವೇಳೆ ಸೆರಾಲಜಿಕಲ್ ಪರೀಕ್ಷೆಗಳು ಸಾಮಾಜಿಕ ಅಂತರದ ಪರಿಣಾಮ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ವೈರಸ್ ದೃಢಪಡಲು 14 ದಿನ ಕಾಲಾವಕಾಶ ನೀಡಲಾಗಿದ್ದು, ಈ ವೇಳೆ ಹಲವು ರೋಗಿಗಳಲ್ಲಿ 7 ದಿನಗಳಲ್ಲಿಯೇ ಲಕ್ಷಣಗಳು ಕಾಣಿಸಲು ಆರಂಭವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp