ಮೈಸೂರು: ರಕ್ತದಾನಿಗಳಿಗೆ ಪಿಕ್-ಅಪ್ ಆ್ಯಂಡ್ ಡ್ರಾಪ್ ಫ್ರೀ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ಗಳಲ್ಲಿ ದಾನಿಗಳ ಕೊರತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನ ಹಲವು ಬ್ಲಡ್ ಬ್ಯಾಂಕ್ ಗಳು ದಾನಿಗಳಿಗೆ ಫ್ರೀ ಪಿಕ್-ಅಪ್ ಹಾಗೂ ಡ್ರಾಪ್ ವ್ಯವಸ್ಥೆ ಮಾಡುವುದಾಗಿ ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ಗಳಲ್ಲಿ ದಾನಿಗಳ ಕೊರತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನ ಹಲವು ಬ್ಲಡ್ ಬ್ಯಾಂಕ್ ಗಳು ದಾನಿಗಳಿಗೆ ಫ್ರೀ ಪಿಕ್-ಅಪ್ ಹಾಗೂ ಡ್ರಾಪ್ ವ್ಯವಸ್ಥೆ ಮಾಡುವುದಾಗಿ ತಿಳಿಸಿವೆ. 

ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜೀವಧಾರಾ ಬ್ಲಡ್ ಬ್ಯಾಂಕ್ ರಕ್ತದಾನಿಗಳಿಗೆ ಫ್ರೀ ಪಿಕ್-ಅಪ್ ಆ್ಯಂಡ್ ಡ್ರಾಪ್ ಮಾಡುವುದಾಗಿ ಘೋಷಣೆ ಮಾಡಿದೆ. 

ಲಾಕ್'ಡೌನ್ ಹಿನ್ನೆಲೆಯಲ್ಲಿ ಹಲವು ಬ್ಲಡ್ ಬ್ಯಾಂಕ್ ಹಾಗೂ ಸಂಘಟನೆಗಳು ಸಾಮೂಹಿಕ ರಕ್ತದಾನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿಲ್ಲ. ಹೀಗಾಗಿ ರಕ್ತದಾನಿಗಳ ಕೊರತೆ ಎದುರಾಗಿದೆ. ಹೀಗಾಗಿ ಹಲವು ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ರಕ್ತದಾನ ಮಾಡಲು ಮುಂದಾಗುವ ರಕ್ತದಾನಿಗಳಿಗೆ ಉಚಿತ ಪಿಕ್'ಅಪ್ ಆ್ಯಂಡ್ ಡ್ರಾಪ್ ಮಾಡುವ ನಿರ್ಧಾರಕ್ಕೆ ಬ್ಲಡ್ ಬ್ಯಾಂಕ್ ಗಳು ಬಂದಿವೆ. 

ಜೀವಧಾರಾ ಬ್ಲಡ್ ಬ್ಯಾಂಕ್ ಟ್ರಸ್ಟಿ ಎಸ್ಇ ಗಿರೀಶ್ ಮಾತನಾಡಿ, ಪ್ರತೀನಿತ್ಯ ವಿವಿಧ ಬ್ಲಡ್ ಗ್ರೂಪ್ ಗಳ 70-80 ಯುನಿಟ್ ಗಳಷ್ಟು ರಕ್ತ ಬರುತ್ತಿತ್ತು. ಆದರೆ, ರಾಜ್ಯ ಸಂಪೂರ್ಣವಾಗಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಈ ಸಂಖ್ಯೆ 10 ಯುನಿಟ್'ಗೆ ಇಳಿದಿದೆ. ಹೀಗಾಗಿ ರಕ್ತದಾನಿಗಳ ಸಂಖ್ಯೆ ಹೆಚ್ಚಿಸಲು ನಾವು ಇಂತಹ ಆಲೋಚನೆಗಳನ್ನು ಮಾಡಬೇಕಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಗ್ರೂಪ್ ಗಳಲ್ಲಿ ನಮ್ಮ ಸಂಖ್ಯೆಯನ್ನು ಶೇರ್ ಮಾಡಲಾಗಿದ್ದು, ರಕ್ತದಾನ ಮಾಡಲು ಇಚ್ಛಿಸುವವರು ಆ ಸಂಖ್ಯೆಗೆ ಕರೆ ಮಾಡಿ ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದ್ದಾರೆ. 

ರಕ್ತದಾನ  ಮಾಡಲು ಇಚ್ಛಿಸುವವರು 92437 81900 ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ರಕ್ತದಾನಿಗಳಿಗೆ ಫ್ರೀ ಪಿಕ್-ಅಪ್ ಅ್ಯಂಡ್ ಡ್ರಾಪ್ ಮಾಡಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com