ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಾಜಕಾರಣಿಗಳು

 ಬೆಂಗಳೂರು: ಕೋವಿಡ್-19 ಸೋಂಕಿತರ ಚಿಕಿತ್ಸಾ ಸೌಕರ್ಯಗಳಿಗೆ ಲವು ರಾಜಕಾರಣಿಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು: ಕೋವಿಡ್-19 ಸೋಂಕಿತರ ಚಿಕಿತ್ಸಾ ಸೌಕರ್ಯಗಳಿಗೆ ಲವು ರಾಜಕಾರಣಿಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. 

ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ‍ಪಿ.ಸಿ. ಮೋಹನ್ ₹2 ಕೋಟಿ ಅನುದಾನ ನೀಡಿದ್ದಾರೆ. ಕೊರೊನಾ ಎದುರಿಸಲು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಶ್ಲಾಘಿಸಿರುವ ಮೋಹನ್, ಈಗಾಗಲೇ ರಾಜ್ಯ ಸರ್ಕಾರ 1700 ಹಾಸಿಗೆಗಳನ್ನೊಳಗೊಂಡ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಮುಚ್ಚಯವನ್ನು ಕೋವಿಡ್-19 ಸೋಂಕಿತರಿಗಾಗಿ ಪ್ರತ್ಯೇಕವಾಗಿರಿಸಿದ್ದು, ಈ ಆಸ್ಪತ್ರೆ ಸಮುಚ್ಚಯಗಳ ತೀವ್ರ ನಿಗಾ ಘಟಕಗಳಲ್ಲಿ ಅತ್ಯಾವಶ್ಯವಾಗಿರುವ ವೆಂಟಿಲೇಟರ್ ಸೌಲಭ್ಯ, ಎನ್-95 ರೆಸ್ಪಿರೇಟರ್ಸ್ ಮತ್ತು ಸರ್ಜಿಕಲ್ ಮಾಸ್ಕ್ ಸೇರಿದಂತೆ ಪರ್ಸನಲ್ ಪ್ರೊಟೆಕ್ಟೀವ್ ಉಪಕರಣಗಳೇ ಮೊದಲಾದ ಅಗತ್ಯ ಪರಿಕರಗಳನ್ನು ತುರ್ತಾಗಿ ಖರೀದಿಸುವಂತೆ ಸೂಚಿಸಿದರು.

ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ 2,500 ಗ್ಲೋವ್ಸ್, 150 ಕ್ಯಾನ್ ಫ್ಲೋರ್ ಕ್ಲೀನರ್ಸ್,1 ಸಾವಿರ ಕೆಜಿ ಬ್ಲಿಚಿಂಗ್ ಪೌಡರ್ ಅನ್ನು ಖರೀದಿಸಿ ನಗರ ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ. ಜೇವರ್ಗಿ ಶಾಸಕ ಅಜಯ್ ಸಿಂಗ್ 11 ಸಾವಿರ ಮಾಸ್ಕ್ ಗಳನ್ನು ಪೊಲೀಸರಿಗೆ, ಕಂದಾಯ ಸಿಬ್ಬಂದಿಗೆ ನೀಡಿದ್ದರು, 

ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ ಹಲವರಿಂದ ದೇಣಿಗೆ ಸಂಗ್ರಹಿಸಿ 11 ಸಾವಿರ ಕುಟುಂಬಗಳಿಗೆ5 ಕೆಜಿ ಅಕ್ಕಿ, 1 ಕೆಜಿ ಅಡುಗೆ ಎಣ್ಣೆ, ತೊಗರಿ ಬೇಳೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com