ಕೊರೊನಾ ಬಂದ ಹಿನ್ನೆಲೆ ರಸ್ತೆಗಿಳಿದ ವಾಹನ್ ಸೀಜ್, ಕ್ರಿಕೆಟ್ ಆಡುವ ಮಕ್ಕಳಿಗೆ ಬಿತ್ತು ಏಟು

ಸಂಪೂರ್ಣ ದೇಶವೇ ಲಾಕ್ ಡೌನ್ ಆದರೂ, ನಗರದ ಕೆಲವು ಪುಡಾರಿಗಳು ಸರ್ಕಾರದ ಆದೇಶ ದಿಕ್ಕರಿಸಿ ಸಂಚಾರ ನಡೆಸಿದರು. ಇದಕ್ಕೆ ಪೊಲೀಸರು ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು.
ಸಂಚಾರಿ ಪೊಲೀಸರು
ಸಂಚಾರಿ ಪೊಲೀಸರು

ಹುಬ್ಬಳ್ಳಿ: ಸಂಪೂರ್ಣ ದೇಶವೇ ಲಾಕ್ ಡೌನ್ ಆದರೂ, ನಗರದ ಕೆಲವು ಪುಡಾರಿಗಳು ಸರ್ಕಾರದ ಆದೇಶ ದಿಕ್ಕರಿಸಿ ಸಂಚಾರ ನಡೆಸಿದರು. ಇದಕ್ಕೆ ಪೊಲೀಸರು ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು.

ಮನೆಯಲ್ಲಿ ಇರಲು ಸೂಚಿಸಿದರು ದಾರಿಗಿಳಿದ ಸಾರ್ವಜನಿಕರ ವಿರುದ್ಧ ಪೊಲೀಸರು ಕೆಂಡಕಾರಿದ್ದಾರೆ. ಅಲ್ಲದೆ ಎಷ್ಟೇ ಬುದ್ದಿ ಹೇಳಿದರು ಕೂಡಾ ಕೇಳದೆ ಮತ್ತೆ ಸಂಚಾರ ನಡೆಸುತ್ತಿದ್ದ ವೇಳೆಯಲ್ಲಿ ನಗರದ ಪೋಲಿಸರು ಇಲ್ಲಿನ ಕೇಶ್ವಾಪುರ ಸರ್ಕಲ್ ಹತ್ತಿರ ಹಿಡಿದು ಬೈಕ್ ಸೀಜ್ ಮಾಡಿ ಬುದ್ದಿ ಕಲಿಸಿದ್ದಾರೆ. ಅನಗತ್ಯವಾಗಿ ಸಂಚಾರ ಮಾಡುವವರು ರಸ್ತೆಗೆ ಬರಲು ವಿಚಾರ ಮಾಡಬೇಕಾಗುತ್ತದೆ.

ಚಿಕ್ಕಬಳ್ಳಾಪುರದಲ್ಲಿ ಮತ್ತೆ 5 ಪ್ರಕರಣ ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಕೊರೋನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ
ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟಿರುವ 60 ವರ್ಷದ ಧರ್ಮ ಪ್ರಚಾರಕರೋರ್ವರು ಮಾರ್ಚ್ 13ರಂದು ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇವರು ತುಮಕೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

24 ಜನರು ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದು, 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 8 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಉಳಿದ ಮೂವರು ಆರೋಗ್ಯ ಸಿಬ್ಬಂದಿಯಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com