ಲಾಕ್‌ಡೌನ್ ಆದೇಶ ಉಲ್ಲಂಘಿಸಿದ್ದಕ್ಕಾಗಿ ಬೆಂಗಳೂರು ಪೊಲೀಸರಿಂದ 2,000 ವಾಹನ ವಶ

ಕೊರೊನವೈರಸ್‍ ಹರಡುವಿಕೆ ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯಲ್ಲಿ ಹೊರಗಡೆ ಅನಾವಶ್ಯಕವಾಗಿ ತಿರುಗಾಡಿದ 2,000 ಕ್ಕೂ ಹೆಚ್ಚು ವಾಹನಗಳನ್ನು ನಗರ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಲಾಕ್ ಡೌನ್ ನಿಯಮ ಮುರಿದ ವಾಹನಗಳ ವಶ (ಸಾಂದರ್ಭಿಕ ಚಿತ್ರ)
ಲಾಕ್ ಡೌನ್ ನಿಯಮ ಮುರಿದ ವಾಹನಗಳ ವಶ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೊರೊನವೈರಸ್‍ ಹರಡುವಿಕೆ ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯಲ್ಲಿ ಹೊರಗಡೆ ಅನಾವಶ್ಯಕವಾಗಿ ತಿರುಗಾಡಿದ 2,000 ಕ್ಕೂ ಹೆಚ್ಚು ವಾಹನಗಳನ್ನು ನಗರ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಅಧಿಕೃತ ಮೂಲಗಳಂತೆ, ಕೊರೊನವೈರಸ್‍ ಹರಡುವಿಕೆ ತಡೆಯಲು ಹೇರಲಾಗಿರುವ ಲಾಕ್‍ಡೌನ್‍ ನಿಯಮ ಉಲ್ಲಂಘಿಸಿ ಬೀದಿಗಿಳಿಯುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸರಿಗೆ ಸೂಚಿಸಿದ್ದರು.

ಮೂತ್ರಪಿಂಡ ರೋಗಿಗಳು ಸೇರಿದಂತೆ ವೈದ್ಯಕೀಯ ನೆರವು ಅಗತ್ಯವಿರುವ ಜನರಿಗೆ ಸಹಾಯ ನೀಡುವುದು ಸೇರಿದಂತೆ 16 ನಿರ್ದೇಶನಗಳನ್ನು ಪೊಲೀಸ್‍ ಆಯುಕ್ತರುವ ಹೊರಡಿಸಿದ್ದಾರೆ. ಜನರನ್ನು ಹೆದರಿಸಲು ಲಾಠಿಗಳನ್ನು ಬಳಸದಂತೆಯೂ ಪೊಲೀಸ್ ಆಯುಕ್ತರು ಪೊಲೀಸರಿಗೆ ಸೂಚಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಲಾಕ್‌ಡೌನ್ ನಿಯಮ ಉಲ್ಲಂಘಿಸುವವರೊಂದಿಗೆ ಮೌಖಿಕವಾಗಿ ಮಾತನಾಡಿ ಪರಿಸ್ಥಿತಿ ನಿಭಾಯಿಸುವಂತೆ ಅವರು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com