ಮೈಸೂರು: ನಾಗಾಲ್ಯಾಂಡ್ ವಿದ್ಯಾರ್ಥಿಗಳಿಗೆ ಸೂಪರ್ ಮಾರ್ಕೆಟ್ ಪ್ರವೇಶ ನಿರಾಕರಣೆ,ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ನಾಗಾಲ್ಯಾಂಡಿನ ವಿದ್ಯಾರ್ಥಿಗಳನ್ನು ಸೂಪರ್ ಮಾರ್ಕೆಟ್ ಒಳಗಡೆ ಬಿಟ್ಟುಕೊಳ್ಳದ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. 
ಸೂಪರ್ ಮಾರ್ಕೆಟ್
ಸೂಪರ್ ಮಾರ್ಕೆಟ್

ಮೈಸೂರು: ನಾಗಾಲ್ಯಾಂಡಿನ ವಿದ್ಯಾರ್ಥಿಗಳನ್ನು ಸೂಪರ್ ಮಾರ್ಕೆಟ್ ಒಳಗಡೆ ಬಿಟ್ಟುಕೊಳ್ಳದ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. 

ಸೂಪರ್ ಮಾರ್ಕೆಟ್ ನಲ್ಲಿ ಪ್ರವೇಶ ನಿರ್ಬಂಧ ಕುರಿತ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದ ವಿದ್ಯಾರ್ಥಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ನಂತರ ಇದು ವೈರಲ್ ಆಗಿತ್ತು.

ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿರುವ ಪೊಲೀಸರು, ಸೂಪರ್ ಮಾರ್ಕೆಟ್ ಮ್ಯಾನೇಜರ್, ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ಜೆಎಲ್ ಬಿ ರಸ್ತೆಯಲ್ಲಿನ ಸೂಪರ್ ಮಾರ್ಕೆಟ್ ಗೆ ತೆರಳಿದಾಗ 25 ನಿಮಿಷ ಸಾಲಿನಲ್ಲಿ ನಿಲ್ಲಿಸಿದ್ದರು. ಆದರೆ, ನಂತರ ನಾವು ಭಾರತೀಯರು ಅಲ್ಲ ಎಂದು ಹೇಳಿ ಮಾರ್ಕೆಟ್ ಒಳಗಡೆ ತೆರಳಲು ಭದ್ರತಾ ಸಿಬ್ಬಂದಿ ಹಾಗೂ ಸೂಪರ್ ಮಾರ್ಕೆಟ್ ಸಿಬ್ಬಂದಿ ಅವಕಾಶ ನೀಡಲಿಲ್ಲ ಎಂದು ಮೈಸೂರಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಯೊಕೈ ಜಾನಿ ಕೊನ್ಯಾಕ್ ಮತ್ತು ಅಲಿ ಮೆರೆನ್ ಆರೋಪಿಸಿದರು.

ಆಧಾರ್ ಕಾರ್ಡ್ ತೋರಿಸಿ ಈಶಾನ್ಯ ಭಾರತದರು, ಕಾಲೇಜಿನ ವಿದ್ಯಾರ್ಥಿಗಳು ಎಂದು ತೋರಿಸಿದ್ದರೂ ಮಳಿಗೆ ಒಳಗಡೆ ಬಿಡಲಿಲ್ಲ. ನಂತರ ದಿನಸಿ ಖರೀದಿಸದೆ ಹೊರ ಬಂದಿದ್ದಾಗಿ ಕೊನ್ಯಾಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಾರ್ಕೆಟ್ ಮಾಲೀಕರು ಈ ರೀತಿಯಲ್ಲಿ ವರ್ತಿಸದೆ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಸೂಪರ್ ಮಾರ್ಕೆಟ್ ಸಿಬ್ಬಂದಿಗಳಾದ ಮಂಜುನಾಥ್, ನವೀನ್ , ಅವಿನಾಶ್ ಮತ್ತು ರೇವಣ್ಣ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com